ಕಾಸರಗೋಡು: ವಿಶ್ವ ಹೃದಯ ದಿನದ ಅಂಗವಾಗಿ ಮೈತ್ರಾ ಯುನೈಟೆಡ್ ಹಾರ್ಟ್ ಸೆಂಟರ್ 'ಓ ಮೈ ಹಾರ್ಟ್' ಎಂಬ ಘೋಷಣೆಯೊಂದಿಗೆ ಸೈಕ್ಲೋಥಾನ್ ಮತ್ತು ಮ್ಯಾರಥಾನ್ ಸೆ. 29 ರಂದು ಕಾಸರಗೋಡಿನಲ್ಲಿ ಆಯೋಜಿಸಲಾಗುತ್ತಿದೆ. ಡಿಸ್ಕವರ್, ಪ್ರಸಿದ್ಧ ಸೈಕ್ಲೋಥಾನ್ ಆಯೋಜಕರಾದ ಡಿಸ್ಕವರ್ ರೈಡರ್ಸ್, ಸಂಸ್ಥೆಮೈತ್ರಾ ಯುನೈಟೆಡ್ ಹಾರ್ಟ್ ಸೆಂಟರ್ ಸಹಯೋಗದಲಿ ಮ್ಯಾರಥಾನ್ ಸಂಸ್ಥೆ ವಾಮೋಸ್ ವತಿಯಿಂದ 'ಸೈಕ್ಲೋಥಾನ್ ಮತ್ತು ಮ್ಯಾರಥಾನ್' ಆಯೋಜಿಸುತ್ತಿದೆ.
ಕಾಸರಗೋಡು ನಗರದಿಂದ ಬೆಳಗ್ಗೆ 7ಕ್ಕೆ ಮ್ಯಾರಥಾನ್ ಆರಂಭಗೊಳ್ಳಲಿದ್ದು, ಶಾಸಕ ಎನ್ ಎ ನೆಲ್ಲಿಕುನ್ನು ಹಸಿರು ನಿಶಾನಿ ತೋರಿಸುವ ಮೂಲಕ ಚಾಲನೆ ನೀಡುವರು. ಹೃದಯದ ಆರೈಕೆಯ ಮಹತ್ವ ಮತ್ತು ಹೃದಯದ ಆರೋಗ್ಯವು ಎಷ್ಟು ಮೌಲ್ಯಯುತವಾಗಿದೆ ಎಂಬುದರ ಕುರಿತು ಸಂದೇಶವನ್ನು ಸಾರುವ ಪ್ರಯತ್ನದ ಭಾಗವಾಗಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.