ಕಾಸರಗೋಡು: ಕರ್ಷಕಶ್ರೀ ಸಂಸ್ಥೆಯ ವತಿಯಿಂದ ಓಣಂ-ನಬಿ ದಿನಚರಣೆಯ ಅಂಗವಾಗಿ ಆಯೋಜಿಸುವ ವಿಶೇಷ ಅದೃಷ್ಟ ಚೀಟಿ ಯೋಜನೆ, ಕರ್ಷಕಶ್ರೀ ಸೂಪರ್ ಮಾರ್ಕೆಟ್-ಹೈಪರ್ ಮಾರ್ಕೆಟ್ ವ್ಯಾಪಾರಿಗಳ ಅಭಿನಂದನಾ ಸಮಾರಂಭ ಸೆ. 29ರಂದು ಸಂಜೆ 4ಕ್ಕೆ ಕಾಸರಗೋಡು ನಗರಸಭಾಂಗಣದಲ್ಲಿ ಜರುಗಲಿದೆ.
ಕೇರಳ ರಾಜ್ಯ ವ್ಯಾಪಾರಿಗಳು ಮತ್ತು ಕೈಗಾರಿಕೋದ್ಯಮಿಗಳ ಸಮನ್ವಯ ಸಮಿತಿ ಉಪಾಧ್ಯಕ್ಷ ಹಾಗೂ ಜಿಲ್ಲಾಧ್ಯಕ್ಷ ಅಹಮದ್ ಶರೀಫ್ ಸಮಾರಂಭ ಉದ್ಘಾಟಿಸುವರು. ಕಾರ್ಯಕ್ರಮದಲ್ಲಿ ಚಲನಚಿತ್ರ ನಟಿ ಪ್ರಿಯಾಂಕಾ ವಿಶೇಷ ಅತಿಥಿಯಾಗಿ ಭಾಗವಹಿಸುವರು ಎಂದು ಕರ್ಷಕಶ್ರೀ ಎಂ.ಡಿ ಅಬ್ದುಲ್ಲಕುಞÂ ಇ. ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಬಿ.ಎಂ.ಅಲ್ತಾಫ್, ಇಬ್ರಾಹಿಂ ಮಸೂದ್, ಎಂ ಸಜಿತ್ ಮತ್ತು ಕೆ.ವಿ.ಬಾಲಕೃಷ್ಣನ್ ಉಪಸ್ಥಿತರಿದ್ದರು.