ಕೊಚ್ಚಿ: ಆಲತ್ತೂರು ಪೆÇಲೀಸ್ ಠಾಣೆಯಲ್ಲಿ ವಕೀಲರ ಜೊತೆ ಅನುಚಿತವಾಗಿ ವರ್ತಿಸಿದ ಎಸ್ ಐಗೆ ಹೈಕೋರ್ಟ್ ಎರಡು ತಿಂಗಳು ಜೈಲು ಶಿಕ್ಷೆ ವಿಧಿಸಿದೆ.
ನ್ಯಾಯಮೂರ್ತಿ ದೇವರಾಮಚಂದ್ರನ್ ಅವರು ಎಸ್‍ಐ ರಿನೇಶ್‍ಗೆ ಎರಡು ತಿಂಗಳ ಜೈಲು ಶಿಕ್ಷೆ ವಿಧಿಸಿದರು.
ಆದರೆ ಎಸ್‍ಐ ಸದ್ಯಕ್ಕೆ ಜೈಲಿಗೆ ಹೋಗಬೇಕಿಲ್ಲ. ನ್ಯಾಯಾಲಯವು ಒಂದು ವರ್ಷದವರೆಗೆ ಯಾವುದೇ ರೀತಿಯ ಅಪರಾಧ ಪ್ರಕರಣ ಕೈಗೆತ್ತಿಕೊಳ್ಳದಂತೆ ಆದೇಶಿಸಿ ಶಿಕ್ಷೆಯನ್ನು ಸ್ಥಗಿತಗೊಳಿಸಿತು.
ಘಟನೆಯಲ್ಲಿ ಎಸ್‍ಐ ಈ ಹಿಂದೆ ಹೈಕೋರ್ಟ್‍ಗೆ ಬೇಷರತ್ ಕ್ಷಮೆಯಾಚಿಸಿದ್ದಾರೆ. ಇದನ್ನು ನ್ಯಾಯಾಲಯ ಒಪ್ಪಿಕೊಂಡಿದೆ. ವಕೀಲ ಅಕಿಬ್ ಸುಹೇಲ್ ಅವರು ಸಲ್ಲಿಸಿದ್ದ ನ್ಯಾಯಾಂಗ ನಿಂದನೆ ಅರ್ಜಿಯ ಮೇರೆಗೆ ಹೈಕೋರ್ಟ್ ಈ ಕ್ರಮ ಕೈಗೊಂಡಿದೆ.
ಕಾರು ಅಪಘಾತಕ್ಕೆ ಸಂಬಂಧಿಸಿದ ಪ್ರಕರಣವೊಂದರಲ್ಲಿ ವಾಹನ ಹಸ್ತಾಂತರಿಸಲು ನ್ಯಾಯಾಲಯದ ಆದೇಶದೊಂದಿಗೆ ಠಾಣೆಗೆ ಬಂದಿದ್ದ ವಕೀಲರ ಬಳಿ ಎಸ್‍ಐ ರಿನೀಶ್ ಅಸಭ್ಯವಾಗಿ ವರ್ತಿಸಿದ ದೃಶ್ಯಾವಳಿಗಳು ಹೊರಬಂದಿದ್ದವು.ಬಳಿಕ ಕೋರ್ಟ್ ಘಟನೆಯನ್ನು ಗಂಭೀರವಾಗಿ ಪರಿಗಣಿಸಿತು.