ಕಾಸರಗೋಡು: ಕ್ಲೀನ್ ಸಿವಿಲ್ ಸ್ಟೇಷನ್, ಗ್ರೀನ್ ಸಿವಿಲ್ ಸ್ಟೇಷನ್ ಪರಿಕಲ್ಪನೆಯೊಂದಿಗೆ ಕಸ ಮುಕ್ತ ನವ ಕೇರಳ ಜನಾಂದೋಲನ ಅಭಿಯಾನದ ಅಂಗವಾಗಿ ಕಾಸರಗೋಡು ಜಿಲ್ಲಾಧಿಕಾರಿ ಕಚೇರಿ ವಠಾರ ಸಿವಿಲ್ ಸ್ಟೇಷನನ್ನು ಅಕ್ಟೋಬರ್ 2 ರಂದು ಶುಚಿಗೊಳಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಪಿ. ಬೇಬಿ ಬಾಲಕೃಷ್ಣನ್, ಜಿಲ್ಲಾಧಿಕಾರಿ ಕೆ. ಇನ್ಬಾಶೇಖರ್ ಸ್ವಚ್ಛತಾ ಕಾರ್ಯಕ್ಕೆ ಚಾಲನೆ ನೀಡುವರು.
ಕುರುಚಲು ಕಾಡಿನಿಂದ ಆವೃತವಾಗಿರುವ ಹಾಗೂ ಕಸ ತುಂಬಿಕೊಮಡಿರುವ ಪ್ರದೇಶಗಳನ್ನು ಸ್ವಚ್ಛಗೊಳಿಸಲಾಗುವುದು. ಜತೆಗೆ ಕಚೇರಿಗಳ ಒಳಗೆ ರಾಶಿ ಬಿದ್ದಿರುವ ಹಳೇ ಕಡತಗಳನ್ನು ತೆಗೆದು ಶುಚಿಗೊಳಿಸಲಾಗುವುದು. ಕಚೇರಿಯ ಒಳಗೆ ಮತ್ತು ಹೊರಗೆ ಇರುವ ಎಲ್ಲ ತ್ಯಾಜ್ಯವನ್ನು ತೆಗೆದು ಹಸಿರು ಕಚೇರಿಗಳನ್ನಾಗಿ ಪರಿವರ್ತಿಸಲಾಗುವುದು.
ಸ್ವಚ್ಛತಾ ಅಭಿಯಾನದ ಅಂಗವಾಗಿ ವಿವಿಧ ಕಚೇರಿಗಳ ಪ್ರತಿನಿಧಿಗಳ ಸಭೆ ನಡೆಸಲಾಯಿತು. ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಜಿಪಂ ಅಧ್ಯಕ್ಷೆ ಬೇಬಿ ಬಾಲಕೃಷ್ಣನ್ ಅಧ್ಯಕ್ಷತೆ ವಹಿಸಿದ್ದರು. 'ಕಸಮುಕ್ತ ನವಕೇರಳ ಜನತಾ ಶಿಬಿರ'ದ ಅಂಗವಾಘಿ ಜಿಲ್ಲಾದ್ಯಂತ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು.
ಜಿಲ್ಲಾ ಪಂಚಾಯಿತಿ ಅಧ್ಯಕ್ಷರು ಮಾತನಾಡಿ, ಕಚೇರಿಗಳನ್ನೂ ಹಸಿರು ಕಚೇರಿಯಾಗಿ ಘೋಷಿಸಬೇಕು ಮತ್ತು ಇದರ ಅಂಗವಾಗಿ ಅಕ್ಟೋಬರ್ 2 ರಂದು ಸಿವಿಲ್ ಸ್ಟೇಶನ್ ಆವರಣವನ್ನು ಸ್ವಚ್ಛಗೊಳಿಸಲು ಎಲ್ಲ ನೌಕರರ ಸಹಭಾಗಿತ್ವ ಅಗತ್ಯ. ಜ್ಯವಿಕ ಮತ್ತು ಅಜೈವಿಕ ತ್ಯಾಜ್ಯಗಳು ಹಸಿರು ಕಚೇರಿಯ ಮಾನದಂಡಗಳಲ್ಲಿ ವಿಲೇವಾರಿ ವ್ಯವಸ್ಥೆಗಳು, ಸ್ಟೀಲ್ ಗ್ಲಾಸ್‍ಗಳು, ಪ್ಲೇಟ್‍ಗಳು, ಪೇಪರ್ ತ್ಯಾಜ್ಯ ಸಂಗ್ರಹಣಾ ಸೌಲಭ್ಯಗಳು, ಏಕ-ಬಳಕೆಯ ಪ್ಲಾಸ್ಟಿಕ್‍ಗಳನ್ನು ತಪ್ಪಿಸುವುದು ಮತ್ತು ಸ್ವಚ್ಛವಾದ ಸ್ನಾನಗೃಹದ ಸೌಲಭ್ಯಗಳು ಇದರಲ್ಲಿ ಅಡಕವಾಗಿದೆ.
ಸ್ವಚ್ಛತಾ ಚಟುವಟಿಕೆಗಳು ಗುತ್ತಿಗೆ ಪಡೆದ ಕಾರ್ಮಿಕರು ಮತ್ತು ಹಸಿರು ಕಾರ್ಮಿಕರನ್ನು ಮಾತ್ರವಲ್ಲದೆ ಇಡೀ ಸಮುದಾಯವನ್ನು ಒಳಗೊಂಡಿರಬೇಕು. ಕ್ಲೀನ್ ಸಿವಿಲ್ ಸ್ಟೇಷನ್ ಮತ್ತು ಗ್ರೀನ್ ಸಿವಿಲ್ ಸ್ಟೇಷನ್ ಚಟುವಟಿಕೆಗಳನ್ನು ಪೆÇ್ರೀಟೋಕಾಲ್ ಇಲ್ಲದೆ ಸ್ವಚ್ಛಗೊಳಿಸುವ ಚಟುವಟಿಕೆಗಳಿಗಾಗಿ ಎಲ್ಲಾ ಸಿಬ್ಬಂದಿ ಕೈಜೋಡಿಸಬೇಕು ಎಂದು ತಿಳಿಸಿದರು.
ಎಡಿಎಂ ಪಿ.ಅಖಿಲ್, ತ್ಯಾಜ್ಯ ಮುಕ್ತ ಕೇರಳ ಸಂಯೋಜಕ ಎಚ್. ಕೃಷ್ಣ ್ಯುಪಸ್ಥಿತರಿದ್ದರು. ನವಕೇರಳ ಕ್ರಿಯಾ ಯೋಜನೆಯ ಜಿಲ್ಲಾ ಸಂಯೋಜಕ ಕೆ. ಬಾಲಕೃಷ್ಣನ್ ಸ್ವಾಗತಿಸಿದರು. ಜಿಲ್ಲಾ ಪಂಚಾಯಿತಿ ಕಾರ್ಯದರ್ಶಿ ಪಿ.ಕೆ.ಸಜೀವ್ ವಂದಿಸಿದರು.