HEALTH TIPS

ಕಾರು ಅಪಘಾತ: ಏರ್ ಬ್ಯಾಗ್ ತೆರೆದಾಗ ಉಸಿರುಗಟ್ಟಿ 2 ವರ್ಷದ ಬಾಲಕಿ ಸಾವು!

 ಲಪ್ಪುರಂ: ಕಾರು ಅಪಘಾತವಾದಾಗ ಏರ್ ಬ್ಯಾಗ್ ತೆರೆದುಕೊಂಡಿದ್ದರಿಂದ ಉಸಿರುಗಟ್ಟಿ 2 ವರ್ಷದ ಬಾಲಕಿ ಮೃತಪಟ್ಟಿರುವ ಘಟನೆ ಕೇರಳದಲ್ಲಿ ನಿನ್ನೆ ಸಂಭವಿಸಿದೆ.

ಮಗುವಿನ ಕುಟುಂಬದವರು ಕಾರಿನಲ್ಲಿ ಮಲಪ್ಪುರಂ ಜಿಲ್ಲೆಯ ಕೊಟ್ಟಕಲ್ಲು-ಪದಪರಂಬು ಮಾರ್ಗವಾಗಿ ಹೋಗುತ್ತಿದ್ದರು.

ಈ ವೇಳೆ ಕಾರು ಎದುರಿಗೆ ಬರುತ್ತಿದ್ದ ಲಾರಿಯೊಂದಕ್ಕೆ ಡಿಕ್ಕಿ ಹೊಡೆದಿತ್ತು.

ಡಿಕ್ಕಿಯ ರಬಸಕ್ಕೆ ಕಾರಿನಲ್ಲಿದ್ದ ಏರ್‌ಬ್ಯಾಗ್ ತೆರೆದುಕೊಂಡಿತ್ತು. ಈ ವೇಳೆ ಮುಂದಿನ ಸೀಟ್‌ನಲ್ಲಿ ತಾಯಿ ಜೊತೆ ಕುಳಿತಿದ್ದ ಮಗು ಏರ್‌ಬ್ಯಾಗ್‌ನಲ್ಲಿ ಸಿಲುಕಿ ಉಸಿರುಟ್ಟಿ ಮೃತಪಟ್ಟಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮಗುವಿನ ತಾಯಿ ಸೇರಿದಂತೆ ಕಾರಿನಲ್ಲಿದ್ದ ಇತರ ನಾಲ್ವರು ಸಣ್ಣಪುಟ್ಟ ಗಾಯಗಳಿಂದ ಪಾರಾಗಿದ್ದಾರೆ ಎಂದು ಮಲಪ್ಪುರಂ ಜಿಲ್ಲಾ ಪೊಲೀಸರು ತಿಳಿಸಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries