HEALTH TIPS

ಕಾಸರಗೋಡಿನ ವಿಚಾರಗಳ ವಿಕಾಸ- ಎಡನೀರು ಶ್ರೀ: ಕಾಸರಗೋಡು ಕನ್ನಡ ಮಾಹಿತಿ ಅಭಿಯಾನದ 2ನೇ ಹಂತದ ಉದ್ಘಾಟನಾ ಸಮಾರಂಭ

       ಬದಿಯಡ್ಕ: ಕಾಸರಗೋಡಿನಲ್ಲಿ ಕನ್ನಡ ಏನು ಎಂಬುದನ್ನು ಜಗತ್ತಿಗೆ ಪಸರಿಸುವ ಕಾರ್ಯದಲ್ಲಿ ಟ್ರಸ್ಟ್ನ ಕಾರ್ಯ ಶ್ಲಾಘನೀಯ. ಬಲು ಅಪರೂಪದ ಕಾರ್ಯದ ಮೂಲಕ ಕಾಸರಗೋಡು ವಿಚಾರಗಳ ವಿಕಾಸ ಎಂದು ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ಶ್ರೀಗಳು ನುಡಿದರು.

          ಶನಿವಾರ ಸಂಜೆ ನೀರ್ಚಾಲು ಮಹಾಜನ ಸಂಸ್ಕøತ ಕಾಲೇಜಿನಲ್ಲಿ ಜರಗಿದ ವಿಕಾಸ ಟ್ರಸ್ಟ್ ನ ಕಾಸರಗೋಡು ಕನ್ನಡ ವಿಕಾಸ ಮಾಹಿತಿ ಅಭಿಯಾನದ 2ನೇ ಹಂತದ ಉದ್ಘಾಟನಾ ಸಮಾರಂಭದಲ್ಲಿ ಅವರು ಆಶೀರ್ವಚನವನ್ನು ನೀಡಿ ಮಾತನಾಡಿದರು. 

           ಇದೇ ಸಂದರ್ಭದಲ್ಲಿ ಮಾಹಿತಿ ಅಭಿಯಾನದ 76ನೇ ಸಂಚಿಕೆಯನ್ನು ಅವರು ಬಿಡುಗಡೆಗೊಳಿಸಿದರು. ಕಾಸರಗೋಡು ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಶಿಲ್ಪಾ ದ್ಯಾವಯ್ಯ ಐಪಿಎಸ್ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿ, ಕಾಸರಗೋಡಿನ ಕನ್ನಡಿಗರು ಶಾಂತಿಪ್ರಿಯರು. ಹಿಂದಿನ ಕಾಸರಗೋಡಿಗೂ ಇಂದಿನ ಕಾಸರಗೋಡಿಗೂ ಬಹಳಷ್ಟು ಸುಧಾರಣೆಗಳಿವೆ. ಜನರೊಂದಿಗೆ ಉತ್ತಮ ಒಡನಾಟವನ್ನು ಹೊಂದಿರುವ ಇಲ್ಲಿನ ಕನ್ನಡಿಗರ ಸಂಸ್ಕೃತಿ, ವಿಚಾರಗಳನ್ನು ಜಗತ್ತಿಗೆ ತಲುಪಿಸುವಲ್ಲಿ ವಿಕಾಸ ಟ್ರಸ್ಟ್ ಉತ್ತಮ ಕಾರ್ಯವನ್ನೇ ಮಾಡುತ್ತಿದೆ. ಯುವಸಮುದಾಯವು ಡ್ರಗ್ಸ್ ಮೊದಲಾದ ಮಾದಕ ದ್ರವ್ಯಗಳ ಚಟಕ್ಕೆ ಬಲಿಯಾಗುತ್ತಿದ್ದು ಅದನ್ನು ಹಿಮ್ಮೆಟ್ಟಿಸಿ ಧೈರ್ಯ ತುಂಬಿ ಅವರಿಗೆ ಮರುಜೀವನವನ್ನು ನೀಡುವಲ್ಲಿ ಎಲ್ಲರೂ ಕೈಜೋಡಿಸಬೇಕು. ಇದಕ್ಕಾಗಿ ನಮ್ಮೊಂದಿಗೆ ಸಂಘಸಂಸ್ಥೆಗಳು ಸಹಕರಿಸಬೇಕು ಎಂದು ಅವರು ಕರೆಯಿತ್ತರು. 

          ಬೇಳ ಶೋಕಮಾತಾ ದೇವಾಲಯದ ರೆ.ಫಾ. ಸ್ಟೇನಿ ಪಿರೇರಾ ಶುಭಾಶಂಸನೆಗೈದು ಮಾತನಾಡಿ ವಿಕಾಸ ಟ್ರಸ್ಟ್ ಕನ್ನಡದ ಸೇವೆಯನ್ನು ಮಾಡುವುದರೊಂದಿಗೆ ಕಾಸರಗೋಡಿನ ವೈಭವವನ್ನು ಜಗದಗಲ ಪಸರಿಸುತ್ತಿದೆ ಎಂದರು. ಪದ್ಮಶ್ರೀ ಪುರಸ್ಕೃತ ಸತ್ಯನಾರಾಯಣ ಬೆಳೇರಿ ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಸನ್ಮಾನವನ್ನು ಸ್ವೀಕರಿಸಿ ಅವರು ಮಾತನಾಡಿ ಕಾಸರಗೋಡಿನ ಸಾಧನೆಗಳು ಬೆಳಕಿಗೆ ಬರುವಲ್ಲಿ ವಿಕಾಸ ಟ್ರಸ್ಟ್ನ ಶ್ರಮವಿದೆ ಎಂದರು. 

          ನೀರ್ಚಾಲು ಮಹಾಜನ ವಿದ್ಯಾಸಂಸ್ಥೆಯ ವ್ಯವಸ್ಥಾಪಕ ಜಯದೇವ ಖಂಡಿಗೆ ಅಧ್ಯಕ್ಷತೆ ವಹಿಸಿ ಮಾತನಾಡಿದರು. ವಿಕಾಸ ಟ್ರಸ್ಟ್ ಅಧ್ಯಕ್ಷ ರವಿನಾರಾಯಣ ಗುಣಾಜೆ ಮೊದಲ ಹಂತದ ಅಭಿಯಾನದ ಮಾಹಿತಿಯನ್ನು ಚಿತ್ರಸಹಿತ ವಿವರಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿ ಸ್ವಾಗತಿಸಿದರು. ಕಾರ್ಯಕ್ರಮ ನಿರೂಪಿಸಿದ ದಿವ್ಯಾಗಟ್ಟಿ ಪರಕ್ಕಿಲ ವಂದಿಸಿದರು. 

*ವಿಕಾಸ ಟ್ರಸ್ಟ್ನ ಮೊದಲ ಹಂತದ ಅಭಿಯಾನದ 75 ಚಿತ್ರಗಳನ್ನು ವಿವರ ಸಹಿತ ವೇದಿಕೆಯಲ್ಲಿ ಪ್ರದರ್ಶಿಸಲಾಯಿತು.

* ನಾಡಿನ ಗಣ್ಯರು, ವಿವಿಧ ದೇವಸ್ಥಾನಗಳ ಪ್ರತಿನಿಧಿಗಳು, ಸಾಮಾಜಿಕ, ಧಾರ್ಮಿಕ, ಸಾಂಸ್ಕೃತಿಕ ಕ್ಷೇತ್ರಗಳ ಪ್ರಮುಖರು ಸಮಾರಂಭದಲ್ಲಿ ಪಾಲ್ಗೊಂಡಿದ್ದರು.

* ಪದ್ಮಶ್ರೀ ಸತ್ಯನಾರಾಯಣ ಬೆಳೇರಿ ಅವರನ್ನು ಸನ್ಮಾನಿಸಲಾಯಿತು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries