ಜಬಲ್‌ಪುರ: ಇಂದೋರ್- ಜಬಲ್‌ಪುರ ನಡುವಿನ ಸೋಮನಾಥ ಎಕ್ಸ್‌ಪ್ರೆಸ್ ರೈಲಿನ ಎರಡು ಕೋಚ್‌ಗಳು ಶನಿವಾರ ಬೆಳಿಗ್ಗೆ ಹಳಿತಪ್ಪಿವೆ. ಜಬಲ್‌ಪುರ ನಿಲ್ದಾಣ ಸಮೀಪಿಸುತ್ತಿದ್ದಂತೆಯೇ ಘಟನೆ ನಡೆದಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.

ಬೆಳಿಗ್ಗೆ 5.50ಕ್ಕೆ ಹಳಿ ತಪ್ಪಿದ್ದು, ಸುದೈವವವಶಾತ್ ಯಾವುದೇ ಸಾವು ನೋವು ಸಂಭವಿಸಿಲ್ಲ.
ಎಂಜಿನ್‌ನ ಹಿಂಬದಿಯ ಎರಡು ಬೋಗಿಗಳು ಹಳಿ ತಪ್ಪಿವೆ. ಪ್ಲಾಟ್‌ಫಾರಂಗಿಂತ 50 ಮೀಟರ್ ದೂರದಲ್ಲಿ ಘಟನೆ ನಡೆದಿದ್ದು, ಸರಿಪಡಿಸುವ ಕಾರ್ಯ ಪ್ರಗತಿಯಲ್ಲಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.