HEALTH TIPS

ಜಾರ್ಖಂಡ್: 32ಸಾವಿರ ಫಲಾನುಭವಿಗಳಿಗೆ ಆವಾಸ್‌ ಯೋಜನೆಯ ಮಂಜೂರಾತಿ ಪತ್ರ ನೀಡಿದ ಮೋದಿ

 ರಾಂಚಿ: ಪ್ರಧಾನಮಂತ್ರಿ ಗ್ರಾಮೀಣ ಆವಾಸ್‌ ಯೋಜನೆಯಡಿ ಪ್ರಧಾನಿ ನರೇಂದ್ರ ಮೋದಿಯವರು ಜಾರ್ಖಂಡ್‌ನ ರಾಂಚಿಯಲ್ಲಿ 32 ಸಾವಿರ ಫಲಾನುಭವಿಗಳಿಗೆ ವರ್ಚುವಲ್ ಮೂಲಕ ಮನೆ ನಿರ್ಮಾಣ ಮಂಜೂರಾತಿ ಪತ್ರವನ್ನು ವಿತರಿಸಿದರು. ಇದೇ ವೇಳೆ ಮನೆಗಳ ನಿರ್ಮಾಣಕ್ಕೆ ನೀಡುವ ಹಣದ ಮೊದಲ ಕಂತಿನ ₹32 ಕೋಟಿ ಬಿಡುಗಡೆ ಮಾಡಿದರು.

ಆವಾಸ್‌ ಯೋಜನೆಯಡಿ ಜಾರ್ಖಂಡ್‌ನಲ್ಲಿ ಬಡವರಿಗೆ 1,13,400 ಮನೆಗಳ ನಿರ್ಮಾಣಕ್ಕೆ ಕೇಂದ್ರವು ಅನುಮೋದಿಸಿದೆ.


ಇದೇ ಸಂದರ್ಭದಲ್ಲಿ ದೇಶದಾದ್ಯಂತ ಯೋಜನೆಯ ಪ್ರಯೋಜನ ಪಡೆದ 46,000 ಫಲಾನುಭವಿಗಳಿಗೆ ಮನೆಗಳ ಕೀಗಳನ್ನು ವರ್ಚುವಲ್‌ ಮೂಲಕ ಹಸ್ತಾಂತರಿಸುವ ಪ್ರಕ್ರಿಯೆ ನಡೆಸಿದರು.

₹660 ಕೋಟಿ ಯೋಜನೆಗೆ ಚಾಲನೆ

ಜಾರ್ಖಂಡ್‌ನಲ್ಲಿ ₹660 ಕೋಟಿ ಮೊತ್ತದ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಪ್ರಧಾನಿ ಮೋದಿ ವರ್ಚುವಲ್‌ ಮೂಲಕ ಚಾಲನೆ ನೀಡಿದರು.

ದಿಯೋಘರ್ ಜಿಲ್ಲೆಯ ಮಧುಪುರ್ ಬೈಪಾಸ್ ಲೈನ್ ಮತ್ತು ಹಜಾರಿಬಾಗ್ ಟೌನ್ ಕೋಚಿಂಗ್ ಡಿಪೋದ ಶಂಕುಸ್ಥಾಪನೆ ಕೂ ಈ ಯೋಜನೆಯಲ್ಲಿ ಸೇರಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries