ಜೈಪುರ: ರಾಜಸ್ಥಾನದ ಚಿತ್ತೋರ್‌ಗಢ ಜಿಲ್ಲೆಯಲ್ಲಿ ಶಿಲಾಯುಗದ ಬಂಡೆಗಳ ವರ್ಣಚಿತ್ರಗಳು, ಕಲ್ಲಿನ ಕಪ್‌ಗಳು, ಚೂಪಾದ ಕಲ್ಲಿನ ಕಲಾಕೃತಿಗಳನ್ನು ಇತಿಹಾಸಕಾರರು ಪತ್ತೆಮಾಡಿದ್ದು, ಈ ಭಾಗದಲ್ಲಿ ಪ್ರಾಚೀನ ಶಿಲಾಯುಗದಲ್ಲಿ ಮಾನವರಿದ್ದ ಬಗ್ಗೆ ಪುರಾವೆ ಒದಗಿಸಿದೆ.

ಕೋಟಾದ ಅಲಾನಿಯಾ ನದಿಯಿಂದ 50 ಕಿ.ಮೀ ದೂರದಲ್ಲಿರುವ ಹಳ್ಳಿ ಬಳಿ ಈ ಕಲಾಕೃತಿಗಳು ಪತ್ತೆಯಾಗಿವೆ.
ಅಮರಪುರ ಹಳ್ಳಿ ಬಳಿಯ ಅರಣ್ಯದಲ್ಲಿ ಅಪರೂಪದ ಕಲ್ಲಿನ ಕೆತ್ತನೆಗಳನ್ನು ಕಂಡು ಮೂವರು ಯುವಕರು ಆಶ್ಚರ್ಯಚಕಿತರಾಗಿದ್ದರು. ಬಳಿಕ, ಮಾಹಿತಿ ಆಧರಿಸಿ ಕೋಟಾದ ಮಹರ್ಷಿ ಇತಿಹಾಸ ಕೇಂದ್ರದ ಇತಿಹಾಸಕಾರ ತೇಜ್ ಸಿಂಗ್ ಈ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು.
ಶಿಲಾಯುಗದಲ್ಲಿ ಆಹಾರವನ್ನು ರುಬ್ಬಲು ಬಳಸಿದ್ದಿರಬಹುದಾದ ಕಪ್ ಆಕಾರದ ಕಲ್ಲಿನ ಕೆತ್ತನೆಗಳು ಮತ್ತು ರುಬ್ಬುವ ಕಲ್ಲು ಪತ್ತೆಯಾಗಿದೆ ಎಂದು ಸಿಂಗ್ ಹೇಳಿದ್ದಾರೆ. ಕಪ್ ಆಕಾರದ ಕೆತ್ತನೆ ಮತ್ತು ಬಂಡೆಗಳ ಮೇಲಿನ ವರ್ಣಚಿತ್ರಗಳು ಶಿಲಾಯುಗದ ಗುಣಲಕ್ಷಣಗಳನ್ನು ಹೊಂದಿವೆ.
ಕೆತ್ತನೆಗಳು ಪ್ರಾಯಶಃ 35,000 ದಿಂದ 2,00,000 ವರ್ಷಗಳ ಹಿಂದಿನವು ಎಂದು ಅವರು ಹೇಳಿದ್ದಾರೆ.
ರುಬ್ಬುವ ಕಲ್ಲು 2.4 ಕೆ.ಜಿ ತೂಕವಿದ್ದು, ಚೂಪಾದ ಕಲ್ಲುಗಳೂ ಸ್ಥಳದಲ್ಲಿ ಪತ್ತೆಯಾಗಿವೆ. ಈ ಹಿಂದೆ ಈ ಪ್ರದೇಶದಲ್ಲಿ ವಾಸವಿದ್ದ ಜನರು ಕಾಡಿನ ಧಾನ್ಯ, ಕಾಳು ಮತ್ತು ಇತರೆ ಆಹಾರ ಪದಾರ್ಥಗಳನ್ನು ರುಬ್ಬಲು ಈ ಕಲ್ಲಿನ ಸಾಧನಗಳನ್ನು ಬಳಸುತ್ತಿದ್ದರು ಎಂಬುದು ಗೊತ್ತಾಗುತ್ತದೆ ಎಂದು ಅವರು ಹೇಳಿದ್ದಾರೆ.
ಹೆಚ್ಚಿನ ಪರಿಶೀಲನೆಗಾಗಿ ಸಂಶೋಧನೆಯ ಮಾಹಿತಿಯನ್ನು ಜೋಧ್‌ಪುರದಲ್ಲಿರುವ ಪುರಾತತ್ವ ಇಲಾಖೆಯ ಕಚೇರಿಯೊಂದಿಗೆ ಹಂಚಿಕೊಳ್ಳಲಾಗಿದೆ.