ತಿರುವನಂತಪುರಂ: ರಾಜ್ಯದಲ್ಲಿ ವಿವಿಧ ಕಾರಣಗಳಿಂದ ಆತ್ಮಹತ್ಯೆ ಪ್ರಕರಣಗಳು ಹೆಚ್ಚುತ್ತಿವೆ. ಐದು ವರ್ಷಗಳ ವರದಿಗಳ ಪ್ರಕಾರ, 364 ಪೋಲೀಸ್ ಠಾಣೆ ವ್ಯಾಪ್ತಿಯಲ್ಲಿ 36,213 ಮಂದಿ ಜನರು ಪ್ರಾಣ ಕಳೆದುಕೊಂಡಿದ್ದಾರೆ. ಇವರಲ್ಲಿ 21,476 ಪುರುμÀರು ಮತ್ತು 600 ಮಕ್ಕಳು ಎಂದು ಆರ್‍ಟಿಐ ದಾಖಲೆಗಳು ತಿಳಿಸಿವೆ.
ಐದು ವರ್ಷಗಳ ರಾಜ್ಯ ಅಪರಾಧ ದಾಖಲೆಗಳ ಬ್ಯೂರೋ ಪ್ರಕಾರ, ಆತ್ಮಹತ್ಯೆಗಳು ಹೆಚ್ಚುತ್ತಿವೆ. 2020ರಲ್ಲಿ ಕೇರಳದಲ್ಲಿ 8500 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಅವರಲ್ಲಿ 25 ಮಂದಿ ಸಾಮೂಹಿಕ ಆತ್ಮಹತ್ಯೆಯ ಮೂಲಕ ಪ್ರಾಣ ಕಳೆದುಕೊಂಡಿದ್ದಾರೆ. ಕೇರಳದಲ್ಲಿ 2021 ರಲ್ಲಿ 9549 ಪ್ರಕರಣಗಳು ಮತ್ತು 2022 ರಲ್ಲಿ 10,162 ಆತ್ಮಹತ್ಯೆ ಪ್ರಕರಣಗಳು ವರದಿಯಾಗಿವೆ.
2023 ರ, ಅಂಕಿಅಂಶಗಳು 10843 ಕ್ಕೆ ಏರಿದೆ. ಯುವಕರು, ಮಧ್ಯವಯಸ್ಕರು ಮತ್ತು ಹಿರಿಯ ನಾಗರಿಕರಲ್ಲಿ ಆತ್ಮಹತ್ಯೆಗೆ ಪ್ರೇರಣೆ ವಿಭಿನ್ನವಾಗಿದೆ ಎಂದು ತಜ್ಞರು ಹೇಳುತ್ತಾರೆ. 18-45 ವರ್ಷ ವಯಸ್ಸಿನವರ ಆತ್ಮಹತ್ಯೆ ಕುರಿತು ನಡೆಸಿದ ಅಧ್ಯಯನದಲ್ಲಿ, 36-40 ವμರ್À ವಯಸ್ಸಿನವರಲ್ಲಿ ಆತ್ಮಹತ್ಯೆಯ ಶೇಕಡಾವಾರು ಪ್ರಮಾಣವು 27.9 ಆಗಿದೆ.
ಐದು ವರ್ಷಗಳ ಹಿಂದೆ, ಕೇರಳವು ದೇಶದಲ್ಲಿ ಐದನೇ ಅತಿ ಹೆಚ್ಚು ಆತ್ಮಹತ್ಯೆಯನ್ನು ಹೊಂದಿತ್ತು. ಬಳಿಕ ಮೂರನೇ ಸ್ಥಾನಕ್ಕೆ ತಲುಪಿತ್ತು. ಅಂಕಿಅಂಶಗಳ ಪ್ರಕಾರ, ಕುಟುಂಬಗಳಲ್ಲಿ ಸಾಮೂಹಿಕ ಆತ್ಮಹತ್ಯೆಯ ಪ್ರವೃತ್ತಿ ಹೆಚ್ಚುತ್ತಿದೆ ಮತ್ತು ಪೋಷಕರು ತಮ್ಮ ಮಕ್ಕಳನ್ನು ಕೊಂದು ನಂತರ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. 60ರಷ್ಟು ಮಹಿಳೆಯರ ಆತ್ಮಹತ್ಯೆಗೆ ಗೃಹಿಣಿಯರೇ ಕಾರಣ. ಆತ್ಮಹತ್ಯೆಗೆ ಆರ್ಥಿಕ ಸಮಸ್ಯೆ, ದಾಂಪತ್ಯ ಕಲಹ, ಕೌಟುಂಬಿಕ ಸಮಸ್ಯೆ, ವೃದ್ಧಾಪ್ಯ ಸಮಸ್ಯೆಗಳೇ ಪ್ರಮುಖ ಕಾರಣ ಎನ್ನುತ್ತಾರೆ ಮನೋವೈದ್ಯರು. ಇನ್ನು ಕೆಲವರು ಅಜ್ಞಾನಗಳ ಕಾರಣಗಳಿಗಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ವೈಜ್ಞಾನಿಕ ಅಧ್ಯಯನಗಳು ಆತ್ಮಹತ್ಯೆ ಪ್ರಯತ್ನಗಳು ಆತ್ಮಹತ್ಯೆಗಳಿಗಿಂತ 20 ಪಟ್ಟು ಹೆಚ್ಚು ಎಂದು ಪತ್ತೆಮಾಡಿದೆ.