HEALTH TIPS

ಸಿರಿಯಾದಲ್ಲಿ ವೈಮಾನಿಕ ದಾಳಿ: 37 ಉಗ್ರರನ್ನು ಹೊಡೆದುರುಳಿಸಿದ ಅಮೆರಿಕ ಸೇನೆ

 ವಾಷಿಂಗ್ಟನ್‌: ಸಿರಿಯಾದಲ್ಲಿ ಉಗ್ರರ ನೆಲೆಗಳನ್ನು ಗುರಿಯಾಗಿಸಿಕೊಂಡು ಅಮೆರಿಕ ಸೇನೆ ನಡೆಸಿದ ವೈಮಾನಿಕ ದಾಳಿಗಳಲ್ಲಿ 37 ಉಗ್ರರನ್ನು ಹೊಡೆದುರುಳಿಸಿರುವುದಾಗಿ ವರದಿಯಾಗಿದೆ.

ಅಮೆರಿಕ ಸೇನೆ ನಡೆಸಿದ ದಾಳಿಯಲ್ಲಿ ಅಲ್‌ ಖೈದಾ ಜತೆ ನಂಟು ಹೊಂದಿರುವ ಸಂಘಟನೆಯ 37 ಉಗ್ರರು ಮೃತಪಟ್ಟಿದ್ದಾರೆ.ಮೃತರಲ್ಲಿ ಇಬ್ಬರು ನಾಯಕರೂ ಸೇರಿದ್ದಾರೆ.

'ಸಿರಿಯಾದ ವಾಯವ್ಯ ಭಾಗದಲ್ಲಿ ಸೆ.24ರಂದು ನಡೆಸಿದ ದಾಳಿಯಲ್ಲಿ ಹುರಾಸ್‌ ಅಲ್‌ ದೀನ್ ಸಂಘಟನೆಯ ಒಂಬತ್ತು ಉಗ್ರರು ಹಾಗೂ ಸೆ.16ರಂದು ಮಧ್ಯ ಸಿರಿಯಾದಲ್ಲಿ ನಡೆಸಿದ ದಾಳಿಯಲ್ಲಿ 28 ಉಗ್ರರು ಬಲಿಯಾಗಿದ್ದಾರೆ' ಎಂದು ಅಮೆರಿಕ ಸೇನೆಯ ಮೂಲಗಳು ತಿಳಿಸಿವೆ.

ಸೆಷ್ಟೆಂಬರ್‌ನ 16 ಮತ್ತು 24ರಂದು ನಡೆಸಿದ ವೈಮಾನಿಕ ದಾಳಿಯಲ್ಲಿ ಯಾವುದೇ ನಾಗರಿಕರಿಗೆ ಹಾನಿಯಾಗಿರುವ ಬಗ್ಗೆ ವರದಿಯಾಗಿಲ್ಲ ಎಂದು ಅಮೆರಿಕ ಪ್ರಕಟಣೆಯಲ್ಲಿ ತಿಳಿಸಿದೆ.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries