HEALTH TIPS

ಓಣಂ ಮಾರುಕಟ್ಟೆ ಕೇಂದ್ರೀಕರಿಸಿ 3881 ತಪಾಸಣೆಗಳು; ಗಂಭೀರ ಲೋಪದೋಷ ಕಂಡು ಬಂದ 108 ಸಂಸ್ಥೆಗಳನ್ನು ಸ್ಥಗಿತಗೊಳಿಸಿದ ತಪಾಸಣಾ ಇಲಾಖೆ

ತಿರುವನಂತಪುರಂ: ಓಣಂ ಸಂದರ್ಭದಲ್ಲಿ ವಿತರಿಸುವ ಆಹಾರ ಪದಾರ್ಥಗಳ ಗುಣಮಟ್ಟ ಮತ್ತು ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಆಹಾರ ಸುರಕ್ಷತಾ ಇಲಾಖೆಯ ನೇತೃತ್ವದಲ್ಲಿ ರಾಜ್ಯಾದ್ಯಂತ 3881 ತಪಾಸಣೆಗಳನ್ನು ನಡೆಸಲಾಗಿದೆ ಎಂದು ಆರೋಗ್ಯ ಸಚಿವೆ ವೀಣಾ ಜಾರ್ಜ್ ಹೇಳಿದ್ದಾರೆ.

231 ಸ್ಕ್ವಾಡ್‍ಗಳು ತಪಾಸಣೆ ನಡೆಸಿವೆ. 476 ಸಂಸ್ಥೆಗಳಿಗೆ ತಿದ್ದುಪಡಿ ನೋಟಿಸ್ ಮತ್ತು 385 ಸಂಸ್ಥೆಗಳಿಗೆ ಕಾಂಪೌಂಡಿಂಗ್ ನೋಟಿಸ್ ನೀಡಲಾಗಿದೆ. ಹೆಚ್ಚಿನ ಪರೀಕ್ಷೆಗಾಗಿ 752 ಕಣ್ಗಾವಲು ಮಾದರಿಗಳು ಮತ್ತು 135 ಶಾಸನಬದ್ಧ ಮಾದರಿಗಳನ್ನು ಸಂಗ್ರಹಿಸಲಾಗಿದೆ. ಪರೀಕ್ಷಾ ಫಲಿತಾಂಶಗಳ ಆಧಾರದ ಮೇಲೆ ಮುಂದಿನ ಕ್ರಮ ಕೈಗೊಳ್ಳಲಾಗುವುದು. ಗಂಭೀರ ಲೋಪ ಕಂಡು ಬಂದ 108 ಸಂಸ್ಥೆಗಳ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಗಿದೆ ಎಂದು ಸಚಿವರು ತಿಳಿಸಿದರು.

ಉತ್ಪಾದನಾ ವಿತರಣಾ ಕೇಂದ್ರಗಳು, ಹೋಟೆಲ್‍ಗಳು, ಬೇಕರಿಗಳು, ಅಡುಗೆ ಘಟಕಗಳು ಮತ್ತು ಹಾಲು, ಖಾದ್ಯ ಎಣ್ಣೆಗಳು, ಪಾಯಸ ಮಿಶ್ರಣ, ಬೆಲ್ಲ, ತುಪ್ಪ, ವಿವಿಧ ರೀತಿಯ ಚಿಪ್ಸ್, ತರಕಾರಿಗಳು, ಟೀ ಪುಡಿ, ಬೇಳೆಕಾಳುಗಳು, ಹಣ್ಣುಗಳು, ಮೀನು ಮೊದಲಾದವುಗಳಿಗೆ ಚೆಕ್ ಪೋಸ್ಟ್‍ಗಳಲ್ಲಿ ತಪಾಸಣೆ ನಡೆಸಲಾಯಿತು. ಓಣಂ ಸಮಯದಲ್ಲಿ ಮಾರುಕಟ್ಟೆಯಲ್ಲಿ ದೊರೆಯುವ ಮಾಂಸ ಇತ್ಯಾದಿ. ಪ್ಯಾಕೆಟ್‍ಗಳಲ್ಲಿ ನೀಡಲಾದ ಆಹಾರ ಪದಾರ್ಥಗಳ ಲೇಬಲ್ ಮಾಹಿತಿಯನ್ನು ಸಹ ಪರಿಶೀಲಿಸಲಾಯಿತು.

ಓಣಂ ಸಮಯದಲ್ಲಿ ನೆರೆಯ ರಾಜ್ಯಗಳಿಂದ ಆಗಮಿಸುವ ಹೆಚ್ಚುವರಿ ಹಾಲು, ಎಣ್ಣೆ ಮತ್ತು ತರಕಾರಿಗಳ ಗುಣಮಟ್ಟವನ್ನು ಖಚಿತಪಡಿಸಿಕೊಳ್ಳಲು, ಚೆಕ್ ಪೋಸ್ಟ್‍ಗಳಲ್ಲಿ ಲೋಪದೋಷ ತಪಾಸಣೆಯನ್ನು ಪೂರ್ಣಗೊಳಿಸಲಾಯಿತು. ಸೆಪ್ಟೆಂಬರ್ 10 ರಿಂದ ಸೆಪ್ಟೆಂಬರ್ 14 ರಂದು ಬೆಳಿಗ್ಗೆ ಆರು ಗಂಟೆಯವರೆಗೆ ದಿನದ 24 ಗಂಟೆಗಳ ಕಾಲ ತಪಾಸಣೆ ನಡೆಸಲಾಯಿತು. ಈ ವೇಳೆ ಆಹಾರ ಪದಾರ್ಥಗಳೊಂದಿಗೆ ಪ್ರವೇಶಿಸಿದ ಎಲ್ಲ ವಾಹನಗಳನ್ನು ತಪಾಸಣೆ ನಡೆಸಲಾಯಿತು. 687 ಪರೀಕ್ಷೆಗಳು ಪೂರ್ಣಗೊಂಡಿವೆ. ಹೆಚ್ಚಿನ ಪರೀಕ್ಷೆಗಾಗಿ ಹಾಲು ಮತ್ತು ಹಾಲಿನ ಉತ್ಪನ್ನಗಳ 751 ಕಣ್ಗಾವಲು ಮಾದರಿಗಳನ್ನು ಸಂಗ್ರಹಿಸಲಾಗಿದೆ. ಚೆಕ್ ಪೆÇೀಸ್ಟ್ ಮೂಲಕ ಖಾದ್ಯ ತೈಲ, ತರಕಾರಿಗಳು, ಹಣ್ಣುಗಳು, ಮೀನು ಮತ್ತು ಮಾಂಸದ ಮಾದರಿಗಳನ್ನು ಸಹ ಸಂಗ್ರಹಿಸಲಾಗಿದೆ. ತಪಾಸಣೆಗೆ 40 ಸ್ಕ್ವಾಡ್‍ಗಳಿದ್ದವು.

ಇಲಾಖೆಯ ಸಂಚಾರಿ ಆಹಾರ ಪರೀಕ್ಷಾ ಪ್ರಯೋಗಾಲಯದ ಸಹಾಯದಿಂದ ಪರೀಕ್ಷೆಗಳನ್ನು ನಡೆಸಲಾಯಿತು. ಹಾಲು ಮತ್ತು ಹಾಲಿನ ಉತ್ಪನ್ನಗಳ ತಪಾಸಣೆಗಾಗಿ ಇಡುಕ್ಕಿಯ ಕುಮಳಿ, ಪಾಲಕ್ಕಾಡ್ ಜಿಲ್ಲೆಯ ಮೀನಾಕ್ಷಿಪುರಂ, ವಳಯಾರ್, ಕೊಲ್ಲಂ ಜಿಲ್ಲೆಯ ಆರ್ಯಂಕಾವ್ ಮತ್ತು ತಿರುವನಂತಪುರಂ ಜಿಲ್ಲೆಯ ಪಾರಸ್ಸಾಲ ಚೆಕ್ ಪೋಸ್ಟ್‍ಗಳಲ್ಲಿ ವಿಶೇಷ ಸ್ಕ್ವಾಡ್‍ಗಳನ್ನು ನಿಯೋಜಿಸಲಾಗಿತ್ತು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries