ತಿರುವನಂತಪುರಂ: ಸರ್ಕಾರಿ ನೌಕರರು ಮತ್ತು ಶಿಕ್ಷಕರಿಗೆ ಓಣಂ ಸಂದರ್ಭದಲ್ಲಿ 4000 ರೂ.ಗಳ ಬೋನಸ್ ಸಿಗಲಿದೆ. ಬೋನಸ್ ಪಡೆಯಲು ಅರ್ಹರಲ್ಲದವರಿಗೆ ವಿಶೇಷ ಹಬ್ಬದ ಭತ್ಯೆಯಾಗಿ 2750 ರೂ.ಗಳನ್ನು ನೀಡಲಾಗುವುದು ಎಂದು ಹಣಕಾಸು ಸಚಿವ ಕೆ.ಎನ್.ಬಾಲಗೋಪಾಲ್ ತಿಳಿಸಿದ್ದಾರೆ.
ಸೇವಾ ಪಿಂಚಣಿದಾರರಿಗೆ ವಿಶೇಷ ರಜಾ ಭತ್ಯೆಯಾಗಿ 1000 ರೂ.ನೀಡಲಾಗುವುದು.. ಸಹಭಾಗಿತ್ವ ಪಿಂಚಣಿ ಯೋಜನೆಯಡಿ ನಿವೃತ್ತರಾಗುವ ನೌಕರರು ವಿಶೇಷ ಹಬ್ಬದ ಭತ್ಯೆಯನ್ನೂ ಪಡೆಯುತ್ತಾರೆ.
ರಾಜ್ಯದ ಎಲ್ಲಾ ಸರ್ಕಾರಿ ನೌಕರರಿಗೆ ಓಣಂ ಮುಂಗಡವಾಗಿ 20,000 ನೀಡಲಾಗುವುದು. ಅರೆಕಾಲಿಕ ಮತ್ತು ಖಾಯಂ ಅಲ್ಲದ ಸೇರಿದಂತೆ ಇತರ ಉದ್ಯೋಗಿಗಳಿಗೆ ಮುಂಗಡ 6000 ರೂ.ಲಭಿಸಲಿದೆ.
ಕಳೆದ ವರ್ಷ ಉತ್ಸವ ಭತ್ತೆ ಪಡೆದ ಗುತ್ತಿಗೆ ಮತ್ತು ಸ್ಕೀಮ್ ವರ್ಕರ್ಸ್ ಸೇರಿದಂತೆ ಎಲ್ಲಾ ವರ್ಗದ ನೌಕರರಿಗೆ ಅದೇ ದರದಲ್ಲಿ ಈ ವರ್ಷವೂ ಉತ್ಸವ ಭತ್ತೆ ನೀಡಲಾಗುವುದು. ಓಣಂ ಸಂದರ್ಭದಲ್ಲಿ 13 ಲಕ್ಷಕ್ಕೂ ಹೆಚ್ಚು ಉದ್ಯೋಗಿಗಳು ಮತ್ತು ಕಾರ್ಮಿಕರಿಗೆ ವಿಶೇಷ ನೆರವು ತಲುಪಲಿದೆ. ಕೇಂದ್ರ ಸರ್ಕಾರದ ನೀತಿಗಳಿಂದ ರಾಜ್ಯಕ್ಕೆ ಆರ್ಥಿಕ ಸಂಕಷ್ಟ ಎದುರಾಗಿದ್ದರೂ ನೌಕರರ ಓಣಂ ಸೌಲಭ್ಯದಲ್ಲಿ ಯಾವುದೇ ಕಡಿತ ಮಾಡಬಾರದು ಎಂದು ಸರ್ಕಾರ ನಿರ್ಧರಿಸಿದೆ. ಕಳೆದ ವರ್ಷ ಮಂಜೂರಾದ ಎಲ್ಲಾ ಸವಲತ್ತುಗಳು ಈ ವರ್ಷವೂ ದೊರೆಯುವಂತೆ ಮಾಡಲಾಗಿದೆ.