ಕೊಚ್ಚಿ: ದಾಖಲಾದ ವಿವಿಧ ಪ್ರಕರಣಗಳಲ್ಲಿ ಆರೋಪಿಗಳಾಗಿರುವ ಸುಮಾರು ನಲವತ್ತು ಪಾಪ್ಯುಲರ್ ಫ್ರ0ಟ್ ಕಾರ್ಯಕರ್ತರ ಕೋಟ್ಯಂತರ ಮೌಲ್ಯದ ಸ್ಥಿರ ಮತ್ತು ಚರ ಆಸ್ತಿಗಳನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‍ಐಎ) ಮುಟ್ಟುಗೋಲು ಹಾಕಿಕೊಂಡಿದೆ.
ಭಯೋತ್ಪಾದಕ ಅಶ್ರಫ್ ಮೌಲ್ವಿ ಆಸ್ತಿಯನ್ನೂ ವಶಪಡಿಸಿಕೊಳ್ಳಲಾಗಿದೆ. ಎನ್‍ಐಎ ಅರ್ಜಿಯ ಪ್ರಕಾರ, ಯುಎಪಿಎ ಕಾಯ್ದೆಯ ಸೆಕ್ಷನ್ 33 ರ ಅಡಿಯಲ್ಲಿ ವಿಶೇಷ ಎನ್‍ಐಎ ನ್ಯಾಯಾಲಯದ ಆದೇಶದ ಅಡಿಯಲ್ಲಿ ಕಠಿಣ ಕ್ರಮ ಕೈಗೊಂಡಿದೆ.
ಪಿಎಫ್ ಐ ಭಯೋತ್ಪಾದಕರಾದ ಕರಮಾನ ಅಶ್ರಫ್ ಮೌಲವಿ, ಅಬ್ದುಲ್ ಸತ್ತಾರ್, ಎಂ.ಎಚ್. ಸಾದಿಕ್ ಅಹಮದ್, ಶಿಹಾಸ್, ಇ.ಪಿ. ಅನ್ಸಾರಿ, ಎಂ.ಎಂ. ಮುಜೀಬ್, ಟಿ.ಎಸ್. ನಜುಮುದ್ದೀನ್, ಜೈನುದ್ದೀನ್, ಪಿ.ಕೆ. ಉಸ್ಮಾನ್, ಯಹಿಯಾಕೋಯ ತಂಙಳ್, ಪಾಪ್ಯುಲರ್ ಫ್ರಂಟ್ ರಾಜ್ಯ ಕಾರ್ಯದರ್ಶಿ ಅಬ್ದುಲ್ ರವೂಫ್, ಕೆ. ಮುಹಮ್ಮದಲಿ ಕುಂಜಾಪು, ಸಿ.ಟಿ. ಸುಲೈಮಾನ್, ವಿ.ಎ. ಅಬ್ದುಲ್ ವಹಾಬ್, ಫಿರೋಜ್ ತಂಬಿ, ಮುಹಮ್ಮದ್ ಮನ್ಸೂರ್, ಬಿ. ಜಿಶಾದ್, ಅಶ್ರಫ್ ಮೌಲವಿ (ಪಾಲಕಾಡ್), ಲಾಡನ್ ನಾಸರ್, ರಾಗಂ ಅಲಿ (ಕೆ. ಅಲಿ), ಎಂ. ಸಹದ್, ಅಶ್ರಫ್, ನಿಶಾದ್, ಶಾಹುಲ್ ಹಮೀದ್, ಸಿರಾಜುದ್ದೀನ್, ಕೆ.ಪಿ. ಮುಹಮ್ಮದಾಲಿ, ಎಂ. ನೌಶಾದ್, ಪಿ. ಜಲೀಲ್, ಎಂ.ಎಸ್. ರಫೀಕ್, ಶಿಹಾಬ್ ಬಾಬು ಮೊದಲಾದವರ ಆಸ್ತಿ ಹಾಗೂ ಯಾಹಿಯಾಕೋಯ ತಂಙಳ್, ಮುಹಮ್ಮದ್ ಮುಬಾರಕ್, ಎಚ್. ಅಬ್ದುಲ್ ರೆಹಮಾನ್, ಟಿ. ಉಮ್ಮರ್, ಫಿರೋಜ್, ಜಮ್ಶೀರ್, ಕಾಜಾ ಹುಸೇನ್, ಜಿಶಾದ್, ಅಶ್ರಫ್ ಮೌಲವಿ, ನಾಸರ್, ಸಹದ್, ಅಶ್ರಫ್, ನಿಶಾದ್, ನೌಶಾದ್, ಟಿ. ಬಶೀರ್, ಸಿರಾಜುದ್ದೀನ್, ಅಮೀರ್ ಅಲಿ, ರಶೀದ್, ನೌಶಾದ್, ಮಹಮ್ಮದ್ ಶಫೀಕ್, ಮಹಮ್ಮದ್ ಹಕೀಂ, ಮಹಮ್ಮದ್ ಮನ್ಸೂರ್, ಅಶ್ರಫ್, ಜಲೀಲ್, ಶಫೀಕ್ ಎಂಬುವವರ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ.
ಎನ್ಐಎ ಪರ ವಿಶೇಷ ಅಭಿಯೋಜಕ ಶಾಸ್ತಮಂಗಲಂ ಅಜಿತ್ ಕುಮಾರ್, ಪಬ್ಲಿಕ್ ಪ್ರಾಸಿಕ್ಯೂಟರ್ ಎಸ್. ಶ್ರೀನಾಥ್ ಉಪಸ್ಥಿತರಿದ್ದರು. ಎನ್ಐಎ ನ್ಯಾಯಾಲಯದ ನ್ಯಾಯಾಧೀಶ ಪಿ.ಕೆ. ಮೋಹನ್‍ದಾಸ್ ಈ ಆದೇಶ ನೀಡಿದ್ದಾರೆ. ಆರೋಪಿಗಳು ಭಯೋತ್ಪಾದಕ ಚಟುವಟಿಕೆಗಳು ಮತ್ತು ಜಿಹಾದ್ ಕಾರಣ ನೀಡಿ ಅವರಿಗೆ ಯುಎಪಿಎ ಅಡಿಯಲ್ಲಿ ಶಿಕ್ಷೆಯಾಗಬೇಕು ಎಂದು ಎನ್‍ಐಎ ಸೂಚಿಸಿದೆ.