ಉಪ್ಪಳ:ಸಾರ್ವಜನಿಕ ಶ್ರೀ ಗಣೇಶೋತ್ಸವಸಮಿತಿ ಬಾಯಾರು ಮುಳಿಗದ್ದೆ ಇದರ 41ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವವು ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ವಿಜೃಂಭಣೆಯಿಂದ ನಡೆಯಿತು.ಈ ಸಂದರ್ಭದಲ್ಲಿ ಊರ ಪರವೂರ ಭಕ್ತ ಬಂಧುಗಳ ಸಹಕಾರದೊಂದಿಗೆ ನಿರ್ಮಾಣಗೊಳ್ಳುತ್ತಿರುವ ಶ್ರೀ ಗಣೇಶ ಮಂದಿರದ ಬಗ್ಗೆ ಮನವಿಪತ್ರವನ್ನು ಬಿಡುಗಡೆ ಮಾಡಲಾಯಿತು. ನೇಪಾಳದ ಶ್ರೀ ಪಶುಪತಿನಾಥ ದೇವಸ್ಥಾನದ ನಿವೃತ್ತ ಪ್ತಧಾನ ಅರ್ಚಕ ಶ್ರೀರಾಮ ಕಾರಂತ ಪದ್ಯಾಣ ಇವರು ಮನವಿ ಪತ್ರ ಬಿಡುಗಡೆಗೊಳಿಸಿ ಶುಭ ಹಾರೈಸಿದರು.
ಬಿಜೆಪಿ ಕಾಸರಗೋಡು ಜಿಲ್ಲಾ ಕಾರ್ಯದರ್ಶಿ ಮಣಿಕಂಠ ರೈ ಉಪಸ್ಥಿತರಿದ್ದರು . ಈ ಸಂದರ್ಭದಲ್ಲಿ ದಕ್ಷಿಣ ಕನ್ನಡ ಬಿ.ಜೆ.ಪಿ. ಜಿಲ್ಲಾಧ್ಯಕ್ಷ ಸತೀಶ್ ಕುಂಪಳ ಶುಭ ಹಾರಯಿಸಿದರು. ಸಂಜೆ ನಡೆದ ಧಾರ್ಮಿಕ ಸಭಾಕಾರ್ಯಕ್ರಮದಲ್ಲಿ ಶ್ಯಾಮಸೂರ್ಯ ಮುಳಿಗದ್ದೆ ಅಧ್ಯಕ್ಷತೆ ವಹಿಸಿದ್ದರು. ಜಯಲಕ್ಷ್ಮಿ ಕಾರಂತ ಮಂಗಲ್ಪಾಡಿ ಧಾರ್ಮಿಕ ಉಪನ್ಯಾಸ ನೀಡಿದರು. ಬಾಲಕೃಷ್ಣ ಶೆಟ್ಟಿ ಹಿರಣ್ಯ ಕಂಬಳಗುತ್ತು ತರವಾಡು ಮನೆ, ರಾಮಚಂದ್ರ ಹಾಳೆಮೂಲೆ ಕರ್ನಾಟಕ ಬ್ಯಾಂಕ್, ರಾಮ .ಬಿ ಅಂಗಡಿಮಾರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಹೆದ್ದಾರಿ ಶಾಲಾ ಪ್ರಬಂಧಕ ರಾಜೇಶ್ .ಯನ್,
ಸಮಿತಿಯ ಪದಾಧಿಕಾರಿಗಳಾದ ಪದ್ಮನಾಭ ನಾಯಕ್ ಮುಳಿಗದ್ದೆ,, ವಸಂತ ಕಲ್ಲಗದ್ದೆ, ರಾಜೇಶ್ ಮಾರು ಸುಣ್ಣಾಡ ಉಪಸ್ಥಿತರಿದ್ದರು. ಕುಮಾರಿ ದಿಶಾ ಪೆರ್ವಡಿ ಯ ಪ್ರಾರ್ಥನೆಯೊಂದಿಗೆ ಪ್ರಾರಂಭವಾದ ಕಾರ್ಯಕ್ರಮದಲ್ಲಿ ಸಮಿತಿಯ ಕಾರ್ಯದರ್ಶಿ ಹರಿಣಾಕ್ಷ ಬದಿಯಾರು ಸ್ವಾಗತಿಸಿದರು.ಶೇಖರ ಶೆಟ್ಟಿ ಬಾಯಾರು ನಿರೂಪಿಸಿ, ಶ್ರೀಧರ ಬದಿಯಾರು ವಂದಿಸಿದರು.ನಂತರ ಹೆದ್ದಾರಿ ಶಾಲೆಯಿಂದ ಹೊರಟ ಗಣೇಶ ಮೂರ್ತಿಯ ಶೋಯಾತ್ರೆ ಬಾಯಾರು ಪಂಚಲಿಂಗೇಶ್ವರ ದೇವಸ್ಥಾನದ ಸರೋವರದಲ್ಲಿ ಜಲಸ್ಥಂಭನೆಯೊಂದಿಗೆ ಮುಕ್ತಾಯವಾಯಿತು.