ಮಂಜೇಶ್ವರ:ದೈಗೋಳಿಯ ಜ್ಞಾನೋದಯ ಸಮಾಜ ಆಶ್ರಯದಲ್ಲಿ ಶ್ರೀ ಗಣೇಶ ಮಂದಿರದಲ್ಲಿ 43ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವವು ಕುರಿಯ ರಾಮಮೂರ್ತಿಯವರ ಪೌರೋಹಿತ್ಯದಲ್ಲಿ ಧಾರ್ಮಿಕ, ಸಾಂಸ್ಕøತಿಕ ಕಾರ್ಯಕ್ರಮಗಳೊಂದಿಗೆ ಜರಗಿತು.
ಶನಿವಾರ ಬೆಳಗ್ಗೆ 8.30ಕ್ಕೆ ಶ್ರೀ ಗಣೇಶ ವಿಗ್ರಹ ಪ್ರತಿμÁ್ಠಪನೆ, ಮಹಾಗಣಪತಿ ಹೋಮ, ಭಕ್ತಿಗೀತೆ ಮತ್ತು ಛದ್ಮವೇಷ ಸ್ವರ್ಧೆಗಳು, ಭಗವದ್ಗೀತೆ ಪಾರಾಯಣ, ಸಂಗೀತ ಕುರ್ಚಿ, ಮಡಕೆಯೊಡೆಯುವ ಸ್ವರ್ಧೆ ನಡೆಯಿತು. ಶ್ರೀ ರಾಮ ಕೃಷ್ಣ ಭಜನಾ ಮಂದಿರ ದೈಗೋಳಿರವರಿಂದ ಭಜನಾ ಕಾರ್ಯಕ್ರಮ ಹಾಗೂ ಶ್ರೀ ಸತ್ಯನಾರಾಯಣ ಭಜನಾ ಮಂದಿರ ಕೋಳ್ಯೂರುಪದವು ಇವರಿಂದ ಕುಣಿತ ಭಜನೆ ನಡೆಯಿತು. ಮದ್ಯಾಹ್ನ 12.30ಕ್ಕೆ ಮಹಾ ಮಂಗಳಾರತಿ, ಪ್ರಸಾದ ವಿತರಣೆ, ಪ್ರಸಾದ ಭೋಜನ ನಡೆಯಿತು.
ಅಪರಾಹ್ನ 2 ರಿಂದ ಸಾಂಸ್ಕೃತಿಕ ಕಾರ್ಯಕ್ರಮದಂಗವಾಗಿ ಪ್ರಸಿದ್ದ ಮೇಳದ ಕಲಾವಿದರಿಂದ ಸುದರ್ಶನ ವಿಜಯ ಯಕ್ಷಗಾನ ಪ್ರದರ್ಶನ ನಡೆಯಿತು. ಸಂಜೆ ನಡೆದ ಸಭಾ ಕಾರ್ಯಕ್ರಮದಲ್ಲಿ ಡಾಕ್ಟರೇಟ್ ಪದವಿ ಪಡೆದ ಕೊಣಿಲ ರಾಘವೇಂದ್ರ ಭಟ್ ಸುಳ್ಯಮೆ, ನಿವೃತ್ತ ಯೋಧ ದಿನಕರ ಕೋಟ್ಯಾನ್ ಸುಳ್ಯಮೆ ಹಾಗೂ ಸಮಾಜ ಸೇವಾಕಾರ್ಯಕ್ಕೆ ಸ್ಪಂದನ ಟ್ರಸ್ಟ್ ಕೋಳ್ಯೂರು ಇವರಿಗೆ ಗೌರವಾರ್ಪಣೆ ನಡೆಯಿತು. ಸಂಜೆ 5 ಕ್ಕೆ ಮಹಾ ಮಂಗಳಾರತಿ, ಪ್ರಸಾದ ವಿತರಣೆ ನಂತರ ಶೋಭಾಯಾತ್ರೆ ಶೋಭಾಯಾತ್ರೆಯು ಶ್ರೀ ಗಣೇಶ ಮಂದಿರದಿಂದ ಹೊರಟು ದೈಗೋಳಿ ಶ್ರೀ ರಾಮಕೃಷ್ಣ ಭಜನಾ ಮಂದಿರ, ದೈಗೋಳಿ ಕಟ್ಟೆ, ಅಡಕಳಕಟ್ಟೆ ಶ್ರೀ ಗಣೇಶಕೃಪಾ ವೀರಾಂಜನೇಯ ವ್ಯಾಯಾಮ ಶಾಲೆ, ಅಡಕಳಕಟ್ಟೆ ಜಂಕ್ಷನ್, ತುಪ್ಪೆ, ಉರ್ಣಿಯಾಗಿ ಕಣಿಯೂರು ಸಾರ್ವಜನಿಕ ಕೆರೆಯಲ್ಲಿ ಗಣೇಶ ವಿಗ್ರಹ ವಿಸರ್ಜನೆ ನಡೆಯಿತು. ನಂತರ ಶ್ರೀ ಗಣೇಶ ಭಕ್ತ ವೃoದ ಕಣಿಯೂರು ಇವರಿಂದ ಸಾರ್ವಜನಿಕ ಅನ್ನ ಸಂತರ್ಪಣೆ ನಡೆಯಿತು.