ವಯನಾಡ್; ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡ 45 ಮಂದಿ ಜನರು ಭೂಕುಸಿತದಲ್ಲಿ ತಮ್ಮ ಜೀವ ಉಳಿಸಿದ ಸ್ವಯಂಸೇವಕರಿಗೆ ಕೃತಜ್ಞತೆ ಸಲ್ಲಿಸಲು ಚುರಲ್ಮಲಾದಿಂದ ನಿಲಂಬೂರ್ ಗೆ ಭೇಟಿ ನೀಡಿದರು.
ಅನೇಕರು ತಮ್ಮ ಆತ್ಮೀಯರನ್ನು ಮೆಲುಕು ಹಾಕುತ್ತಿದ್ದರು. ನಿಲಂಬೂರ್ ಸಿಎಚ್ ಸೆಂಟರ್ ನಲ್ಲಿ ಸಭೆ ನಡೆಯಿತು. ಸಾಮಾಜಿಕ ಕಾರ್ಯಕರ್ತರಾದ ಪಿಒ ನಯೀಮ್ ವಯನಾಡ್, ಮಮ್ಮುಟ್ಟಿ ಅಂಕುಕುನ್ ಮತ್ತು ಸಲೀಂ ಕುಞಲಮಂಡಂ ನೇತೃತ್ವದಲ್ಲಿ ಮುಂಡಕ್ಕೈ ಮತ್ತು ಚುರಲ್‍ಮಲಾ ಪ್ರದೇಶದ 45 ಜನರು ನಿಲಂಬೂರು ತಲುಪಿದ್ದರು. 45 ಮಂದಿ ಎಲ್ಲರನ್ನೂ ಕಳಕೊಂಡ ನತದೃಷ್ಟರಾಗಿದ್ದಾರೆ.
ಪ್ರೀತಿಪಾತ್ರರ ಅಂತಿಮ ವಿರಾಮ ಈ ಮಣ್ಣಿನಲ್ಲಿದೆ. ಆದ್ದರಿಂದ ಈ ಮಣ್ಣು ಮತ್ತು ನಿಮ್ಮ ಕಾಳಜಿಯನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ. ಬಂದವರಲ್ಲಿ ಹಲವರು ನಮ್ಮನ್ನು ಕಾಪಾಡಿದ್ದು ನೀನೇ ಎಂದು ಅಳುಮುಖರಾದರು. ಸ್ವಯಂಸೇವಕರು ಮೃತದೇಹಗಳ ಹುಡುಕಾಟವನ್ನು ವಿವರಿಸಿದಾಗ ಕೆಲವರು ಕಣ್ಣೀರು ಗಳಗಳನೆ ಅತ್ತಿರುವುದು ಕಂಡುಬಂತು.