ತ್ರಿಶೂರ್: ಕೆ.ಎಸ್.ಆರ್.ಟಿ.ಸಿ. ಡಿಪೋಗಳ ನಿರ್ವಹಣಾ ಲಾಭ 4.6 ಶೇಕಡಾ ಹೆಚ್ಚಳಗೊಂಡಿದೆ ಎಂದು ವರದಿಯಾಗಿದೆ. ಈ ಅಂಕಿಅಂಶಗಳು ಕೇವಲ ಟಿಕೆಟ್ ಆದಾಯವನ್ನು ಆಧರಿಸಿವೆ.
ಜುಲೈನಿಂದ ಸೆಪ್ಟೆಂಬರ್ ವರೆಗಿನ ಅವಧಿಯ ಸಂಚಾರದ ಲಾಭವು ಶೇಕಡಾ 4.6 ರಷ್ಟಕ್ಕೆ ಏರಿಕೆಯಾಗಿದೆ. ಟಿಕೆಟ್ ಅಲ್ಲದ ಆದಾಯವನ್ನು ಸೇರಿಸಿದರೆ, ಲಾಭದ ಪ್ರಮಾಣವು ಹೆಚ್ಚಾಗಲಿದೆ.
ದಕ್ಷಿಣ ವಲಯ ಲಾಭದ ಶೇಕಡಾವಾರು ಮುಂಚೂಣಿಯಲ್ಲಿದೆ. 7.6 ರಷ್ಟು (2.67 ಕೋಟಿ ರೂ.). ಮಧ್ಯ ವಲಯ- 2.6 (ರೂ. 0.76 ಕೋಟಿ), ಉತ್ತರ ವಲಯ -2.7 (ರೂ. 0.63 ಕೋಟಿ).ಎಂಬಂತೆ ಲಾಭಗಳಿಸಿದೆ. 70 ಘಟಕಗಳು ಲಾಭದಲ್ಲಿದ್ದು, 23 ಘಟಕಗಳು ನಷ್ಟದಲ್ಲಿವೆ. 19 ಘಟಕಗಳು ನಷ್ಟದಿಂದ ಲಾಭದತ್ತ ಹೊರಳಿವೆ. ವರದಿ ಪ್ರಕಾರ ಲಾಭದಲ್ಲಿದ್ದ ಚೆಂಗನ್ನೂರು ಘಟಕ ನಷ್ಟದ ಹಾದಿ ಹಿಡಿದಿದೆ.
18 ಘಟಕಗಳು ಕಾರ್ಯಾಚರಣೆಯ ಸುಧಾರಣೆ ಮತ್ತು ನಷ್ಟವನ್ನು ಕಡಿಮೆ ಮಾಡಿದ ಪಟ್ಟಿಯಲ್ಲಿದೆ. ಕೊಡುಂಗಲ್ಲೂರು ಘಟಕವು ಕಳೆದ ತಿಂಗಳಿಗಿಂತ ಹೆಚ್ಚಿನ ನಷ್ಟವನ್ನು ಹೊಂದಿದೆ ಎಂದು ಪಟ್ಟಿ ಮಾಡಲಾಗಿದೆ. ಪೂವಾರ್ (0.3), ವೆಲ್ಲರ (0.6), ಕಾಟ್ಟಾಕ್ಕಡ (0.8), ಸಿಟಿ (0.8), ಕಣಿಯಪುರಂ (0.5) ಮತ್ತು ಪತ್ತನಂತಿಟ್ಟ (1.0) ಘಟಕಗಳು ಕಡಿಮೆ ನಿರ್ವಹಣಾ ಲಾಭವನ್ನು ಹೊಂದಿವೆ.
ನಷ್ಟದಿಂದ ಲಾಭದಲ್ಲಿರುವ ಘಟಕಗಳು:
* ಚಾಲಕುಡಿ, * ಮಾವೇಲಿಕ್ಕರ, ಪೆÇನ್ನಾನಿ, ತೊಟ್ಟಿಲ್ ಪಾರ, ಚಿತ್ತೂರು, ಎರ್ನಾಕುಳಂ, ತಿರುವನಂತಪುರಂ ಸೆಂಟ್ರಲ್, *ಕತ್ತುಡಕಲಂ, ವಡಕಂಚೇರಿ, ಕಾಯಂಕುಳಂ, ಕೊಟ್ಟಾಯಂ, *ಆಲಪ್ಪುಳ, ಕಾಸರಗೋಡು, ವೈಕ್ಕ, ಚಂಗನಾಶ್ಶೇರಿ, ತಾಮರಸ್ಸೆರಿ, * ರಾನ್ನಿ, ಮುಲ್ಲಪಳ್ಳಿ.