ಮಂಜೇಶ್ವರ/ರಿಯಾದ್: ಉದ್ಯಾವರದ ಅನಿವಾಸಿಗಳ ಒಕ್ಕೂಟ ರಿಯಾದ್ ಉದ್ದಾರ್ಕಾರ್ಸ್ ವತಿಯಿಂದ 94ನೇ ಸೌದಿ ರಾಷ್ಟ್ರೀಯ ದಿನಾಚರಣೆ ಪ್ರಯುಕ್ತ ರಿಯಾದ್ ರಿಸಾರ್ಟ್‍ನಲ್ಲಿ ಆಯೋಜಿಸಲಾದ "ಮೆಹಫಿಲ್ ಸೀಸನ್ 4"- ಕುಟುಂಬ ಸಮ್ಮಿಲನ ಕಾರ್ಯಕ್ರಮ ಸಂಭ್ರಮದಿಂದ ಸಂಪನ್ನಗೊಂಡಿತು.
ಫಯಾಝ್ ಮಾಹಿನ್ ರವರ ಖುರಾನ್ ಪಾರಾಯಣದೊಂದಿಗೆ ಚಾಲನೆ ದೊರಕಿದ ಕುಟುಂಬ ಸಮ್ಮಿಲನ ಸಂಭ್ರಮವನ್ನು ರಿಯಾದ್ ಹೆಲ್ತ್ ಆರ್ಗನೈಸೇಶನ್ ಸಮಿತಿ ಸಲಹೆಗಾರ ಕುಂಞಪ್ಪ ಮೂಸಾ ಉದ್ಘಾಟಿಸಿದರು.
ಈ ಸಂದರ್ಭ ವೇದಿಕೆಯಲ್ಲಿ ಇಕ್ಬಾಲ್ ಮೊಹಮ್ಮದ್, ಮೂಸ ಪ್ಯಾಲೇಸ್, ಉಸ್ಮಾನ್ ಪ್ಯಾಲೇಸ್, ಅಯ್ಯೂಬ್ ಲಟ್ವಾನ್, ಮುಸ್ತಫಾ ಕೆ.ಎಸ್., ಆಶಿಫ್ ಸುಲೈಮಾನ್, ಫಯಾಜ್, ಅಜಿತ್ ಮಾಡ, ಅಬು ಜಲಾಲ್, ನಿಸಾರ್ ಗುಡ್ಡೆ, ಅನ್ಸಾಫ್ ದುಬೈ, ಸಿದ್ದಿಕ್ ದುಬೈ, ಜಾಶಿಮ್ ದುಬೈ ಮೊದಲಾದವರು ಉಪಸ್ಥಿತರಿದ್ದರು. ಸಯ್ಯದ್ ಪೋಕರ್, ಸಿದ್ದಿಕ್ ಮೌಲಾನಾ ರೋಡ್ ಶುಭಹಾರೈಸಿ ಮಾತನಾಡಿದರು.
ಸಾಮಾಜಿಕ ಕಾರ್ಯಕರ್ತರಾದ ಸಿದ್ದಿಕ್ ಮೌಲಾನರೋಡ್, ಖಾಲಿದ್, ಮುನಾಜ್, ಸಮದ್ ಚಪ್ಪ, ಹಾಗೂ ಫಜೀನಾ ಸಲೀಂ ಎಂಬವರನ್ನು ಶಾಲು ಹೊದಿಸಿ ಸನ್ಮಾನಿಸಿ ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಯಿತು. ಸುವೈಲ್ ಆದಂ ಅನಿವಾಸಿಗಳ ಆರೋಗ್ಯ, ಸಂಪಾದನೆ ಹಾಗೂ ಉಳಿತಾಯ ಕುರಿತು ಉಪನ್ಯಾಸ ನೀಡಿದರು.
ಬಳಿಕ ನಡೆದ ಮನರಂಜನಾ ಕಾರ್ಯಕ್ರಮದಲ್ಲಿ ವಿವಿಧ ಆಟೋಟ ಸ್ಪರ್ಧೆಗಳು ನಡೆಯಿತು. ಪುರುಷರಿಗಾಗಿ, ಮಹಿಳೆಯರಿಗೆ ಹಾಗೂ ಮಕ್ಕಳಿಗಾಗಿ ಏರ್ಪಡಿಸಲಾದ ವಿವಿಧ ರೀತಿಯ ಆಟೋಟ ಸ್ಪರ್ಧೆಗಳು ಕಾರ್ಯಕ್ರಮಕ್ಕೆ ಮೆರುಗನ್ನು ನೀಡಿತು. ಸ್ವರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನಗಳನ್ನು ವಿತರಿಸಲಾಯಿತು.
ಆಶಿಫ್ ಮೂಸಾ, ಅಶ್ರಫ್ ಉಸ್ಮಾನ್, ಫಯಾಜ್, ಅನ್ಸಾರ್ ಸೂಫಿ, ಆಯಿμÁ ರೈಸ ಹಾಗೂ ಫಜೀನಾ ಕಾರ್ಯಕ್ರಮಕ್ಕೆ ನೇತೃತ್ವ ನೀಡಿದರು. ಫರ್ವೀಜ್ ಉಮರ್ ಸ್ವಾಗತಿಸಿ ನಝೀರ್ ಶಾಫಿ ವಂದಿಸಿದರು.