ನವದೆಹಲಿ: ನಾಲ್ಕು ದಿನಗಳ ಭಾರತ ಪ್ರವಾಸಕ್ಕಾಗಿ ಜಮೈಕಾದ ಪ್ರಧಾನ ಮಂತ್ರಿ ಆಯಂಡ್ರ್ಯೂ ಹೋಲ್‌ನೆಸ್ ಅವರು ಇಂದು (ಸೆ.30) ದೆಹಲಿಗೆ ಆಗಮಿಸಲಿದ್ದಾರೆ.
ನವದೆಹಲಿ: ನಾಲ್ಕು ದಿನಗಳ ಭಾರತ ಪ್ರವಾಸಕ್ಕಾಗಿ ಜಮೈಕಾದ ಪ್ರಧಾನ ಮಂತ್ರಿ ಆಯಂಡ್ರ್ಯೂ ಹೋಲ್‌ನೆಸ್ ಅವರು ಇಂದು (ಸೆ.30) ದೆಹಲಿಗೆ ಆಗಮಿಸಲಿದ್ದಾರೆ.
ಈ ವೇಳೆ ಭಾರತ-ಜಮೈಕಾ ನಡುವಿನ ವ್ಯಾಪಾರ, ಹೂಡಿಕೆ ಸಂಬಂಧಿ ಮಾತುಕತೆ ನಡೆಸಿ, ಹಲವು ಒಪ್ಪಂದಗಳಿಗೆ ಅವರು ಸಹಿ ಹಾಕಲಿದ್ದಾರೆ ಎಂದು ವಿದೇಶಾಂಗ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಜಮೈಕಾದ ಪ್ರಧಾನಿಯೊಬ್ಬರು ಇದೇ ಮೊದಲ ಬಾರಿಗೆ ಭಾರತ ಪ್ರವಾಸ ಕೈಗೊಂಡಿದ್ದಾರೆ.
ಜಮೈಕಾ ಪ್ರಧಾನ ಮಂತ್ರಿಯವರ ಈ ಭೇಟಿಯು ಉಭಯ ದೇಶಗಳ ನಡುವಿನ ದೀರ್ಘಕಾಲದ ಬಾಂಧವ್ಯವನ್ನು ಮತ್ತಷ್ಟು ಗಟ್ಟಿಗೊಳಿಸಲಿದೆ ಎಂದು ವಿದೇಶಾಂಗ ಇಲಾಖೆ ಹೇಳಿದೆ.
ಭೇಟಿಯ ವೇಳೆ ಆಯಂಡ್ರ್ಯೂ ಹೋಲ್‌ನೆಸ್ ಅವರು ಪ್ರಧಾನಿ ನರೇಂದ್ರ ಮೋದಿ ಹಾಗೂ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಜೊತೆ ಮಾತುಕತೆ ನಡೆಸಲಿದ್ದಾರೆ.
ಕೇರಿಬಿಯನ್ ದ್ವೀಪ ರಾಷ್ಟ್ರವಾದ ಜಮೈಕಾದೊಂದಿಗೆ ಭಾರತ ಸ್ವಾತಂತ್ರಾಪೂರ್ವದಿಂದಲೂ ಸಂಬಂಧ ಹೊಂದಿದೆ.