HEALTH TIPS

ಹರಿಯಾಣ ವಿಧಾನಸಭೆ ಚುನಾವಣೆ ದಿನಾಂಕ ಬದಲು: ಅ.5ಕ್ಕೆ ಮತದಾನ

           ವದೆಹಲಿ: ಹರಿಯಾಣ ವಿಧಾನಸಭೆಯ ಮತದಾನದ ದಿನಾಂಕವನ್ನು ಅಕ್ಟೋಬರ್‌ 5ಕ್ಕೆ ಮುಂದೂಡಿ ಕೇಂದ್ರ ಚುನಾವಣಾ ಆಯೋಗವು ಕ್ರಮ ಕೈಗೊಂಡಿದೆ. ಈ ಹಿಂದೆ ಅ. 1ರಂದು ಮತದಾನ ನಿಗದಿಯಾಗಿತ್ತು. ಬಿಷ್ಣೋಯಿ ಸಮುದಾಯದವರ ಶತಮಾನದಷ್ಟು ಹಳೆಯದಾದ ಹಬ್ಬವನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಆಯೋಗ ತಿಳಿಸಿದೆ.

             ಮತದಾನ ದಿನಾಂಕ ಮುಂದೂಡಿಕೆಯಾಗಿರುವ ಕಾರಣ, ಜಮ್ಮು ಮತ್ತು ಕಾಶ್ಮೀರ, ಹರಿಯಾಣ ವಿಧಾನಸಭೆಯ ಮತ ಎಣಿಕೆಯನ್ನು ಅ.4ರ ಬದಲಾಗಿ, ಅ.8ಕ್ಕೆ ಮುಂದೂಡಲಾಗಿದೆ ಎಂದು ಆಯೋಗ ಸ್ಪಷ್ಟಪಡಿಸಿದೆ.

           ಗುರು ಜಂಭೇಶ್ವರ ಸ್ಮರಣಾರ್ಥ 300ರಿಂದ 400 ವರ್ಷಗಳಿಂದ ಬಿಷ್ಣೋಯಿ ಸಮುದಾಯದವರು ಆಚರಿಸಿಕೊಂಡು ಬರುತ್ತಿದ್ದ ಹಬ್ಬ ಹಾಗೂ ಮತದಾನದ ಹಕ್ಕು ಗೌರವಿಸಿ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ಆಯೋಗ ತಿಳಿಸಿದೆ.

            ಮತದಾನದ ದಿನಾಂಕವನ್ನು ಮರು ನಿಗದಿಪಡಿಸುವಂತೆ ಅಖಿಲ ಭಾರತ ಬಿಷ್ಣೋಯಿ ಮಹಾಸಭಾದ ಅಧ್ಯಕ್ಷರ ನೇತೃತ್ವದಲ್ಲಿ ನಿಯೋಗವೊಂದು ಚುನಾವಣಾ ಆಯೋಗಕ್ಕೆ ಇತ್ತೀಚಿಗೆ ಮನವಿ ಮಾಡಿತ್ತು.

            'ಪಂಜಾಬ್‌, ಹರಿಯಾಣ, ರಾಜಸ್ಥಾನದ ಬಿಷ್ಣೋಯಿ ಸಮುದಾಯದವರು ಗುರು ಜಂಭೇಶ್ವರ ಅವರ ಸ್ವಗ್ರಾಮವಾದ ರಾಜಸ್ಥಾನದ ಬಿಕಾನೇರ್‌ ಜಿಲ್ಲೆಯ 'ಮುಕಾಮ್‌'ಗೆ ಭೇಟಿ ನೀಡಿ ಗೌರವ ಸಲ್ಲಿಸುತ್ತಾರೆ. ಆ.2ರಂದು ಈ ಸಲ ಹಬ್ಬ ನಡೆಯಲಿದ್ದು, ಹರಿಯಾಣದ ವಿವಿಧೆಡೆಯಿಂದ ಅಲ್ಲಿಗೆ ತೆರಳಲು ಮುಂಚಿತವಾಗಿ ತೆರಳುತ್ತಾರೆ. ಇದರಿಂದ ಲಕ್ಷಾಂತರ ಮಂದಿ ಮತದಾನದ ಹಕ್ಕಿನಿಂದ ವಂಚಿತರಾಗಲಿದ್ದಾರೆ' ಎಂದು ಮನವಿಯಲ್ಲಿ ತಿಳಿಸಿತ್ತು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries