ಕೋಝಿಕ್ಕೋಡ್: ಪಾಲೇರಿ ವಡಕ್ಕುಂಬಾಡು ಹೈಯರ್ ಸೆಕೆಂಡರಿ ಶಾಲೆಯ ವಿದ್ಯಾರ್ಥಿಗಳಲ್ಲಿ ಕಾಮಾಲೆ ರೋಗ ಹರಡುತ್ತಿದೆ. ಸುಮಾರು 50 ವಿದ್ಯಾರ್ಥಿಗಳಿಗೆ ಜಾಂಡೀಸ್ ಇರುವುದು ಪತ್ತೆಯಾಗಿದೆ.
ಚಂಗರೋಟ್ ಪಂಚಾಯತಿ ಅಧಿಕಾರಿಗಳು ಈ ಪ್ರದೇಶದಲ್ಲಿ ಕೂಲ್ ಬಾರ್ ಗಳನ್ನು ಮುಚ್ಚುವಂತೆ ಸೂಚನೆ ನೀಡಿದ್ದಾರೆ.
ಸದ್ಯ ಮಕ್ಕಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪರೀಕ್ಷಾ ಫಲಿತಾಂಶದಲ್ಲಿ ಶಾಲೆಯ ಬಾವಿಯ ನೀರಿನಿಂದ ರೋಗ ಹರಡಿಲ್ಲ ಎಂದು ತಿಳಿದುಬಂದಿದೆ. ಬಳಿಕ ಶಾಲೆಯ ಎಲ್ಲ ಮಕ್ಕಳನ್ನೂ ಪರೀಕ್ಷೆಗೆ ಒಳಪಡಿಸಲು ನಿರ್ಧರಿಸಲಾಗಿದೆ.