HEALTH TIPS

50 ಔಷಧಗಳು 'ಪ್ರಮಾಣಿತ ಗುಣಮಟ್ಟ' ಹೊಂದಿಲ್ಲ: ಕೇಂದ್ರದ ಔಷಧ ನಿಯಂತ್ರಕ ಸಂಸ್ಥೆ

 ವದೆಹಲಿ: ಪ್ಯಾರಾಸಿಟಮೋಲ್, ಪ್ಯಾನ್‌ ಡಿ, ಮಧುಮೇಹ ನಿಯಂತ್ರಣಕ್ಕೆ ಬಳಸುವ ಮಾತ್ರೆಗಳು ಸೇರಿದಂತೆ 50ಕ್ಕೂ ಹೆಚ್ಚು ಔಷಧಗಳ ಮಾದರಿಗಳ ಪಟ್ಟಿ ಸಿದ್ಧಪಡಿಸಿರುವ ಕೇಂದ್ರೀಯ ಔಷಧ ಗುಣಮಟ್ಟ ನಿಯಂತ್ರಣ ಸಂಘಟನೆ (ಸಿಡಿಎಸ್‌ಸಿಒ), ಈ ಮಾದರಿಗಳು 'ಪ್ರಮಾಣಿತ ಗುಣಮಟ್ಟ' ಹೊಂದಿಲ್ಲ ಎಂದು ಹೇಳಿದೆ.

ಔಷಧಗಳ ಕುರಿತು ಆಗಸ್ಟ್‌ ತಿಂಗಳಿಗೆ ಸಂಬಂಧಿಸಿದ ವರದಿಯನ್ನು ಸಿಡಿಎಸ್‌ಸಿಒ ಬಿಡುಗಡೆ ಮಾಡಿದ್ದು, ಈ ಔಷಧಗಳ ಬಗ್ಗೆ ಎಚ್ಚರಿಕೆ ಅಗತ್ಯ ಎಂದು ಹೇಳಿದೆ. ಔಷಧಗಳ ಗುಣಮಟ್ಟಕ್ಕೆ ಸಂಬಂಧಿಸಿ ಸಿಡಿಎಸ್‌ಸಿಒ, ಪ್ರತಿ ತಿಂಗಳು ವರದಿ ಬಿಡುಗಡೆ ಮಾಡುತ್ತದೆ.

ಕ್ಯಾಲ್ಸಿಯಂ ಮತ್ತು ವಿಟಮಿನ್ ಡಿ3 ಮಾತ್ರೆಗಳ ಮಾದರಿಗಳು ಕೂಡ ಪ್ರಮಾಣಿತ ಗುಣಮಟ್ಟ ಹೊಂದಿಲ್ಲ. ಅಲ್ಕೆಮ್‌ ಲ್ಯಾಬರೋಟರೀಸ್, ಹಿಂದೂಸ್ತಾನ ಆಯಂಟಿಬಯೋಟಿಕ್ಸ್ ಲಿಮಿಟೆಡ್‌, ಹೆಟರೊ ಲ್ಯಾಬ್ಸ್‌ ಲಿಮಿಟೆಡ್, ಕರ್ನಾಟಕ ಆಯಂಟಿಬಯೋಟಿಕ್ಸ್ ಅಂಡ್ ಫಾರ್ಮಾಸ್ಯೂಟಿಕಲ್ಸ್ ಲಿಮಿಟೆಡ್, ನೆಸ್ಟರ್ ಫಾರ್ಮಾಸ್ಯೂಟಿಕಲ್ಸ್ ಲಿ., ಪ್ರಿಯಾ ಫಾರ್ಮಾಸ್ಯೂಟಿಕಲ್ಸ್ ಹಾಗೂ ಸ್ಕಾಟ್-ಎಡಿಲ್ ಫಾರ್ಮಾಸಿಯಾ ಲಿಮಿಟೆಡ್‌ ಕಂಪನಿಗಳು ಉತ್ಪಾದಿಸುವ ಔಷಧಗಳ ಕುರಿತು ಈ ವರದಿಯಲ್ಲಿ ಎಚ್ಚರಿಕೆ ನೀಡಲಾಗಿದೆ.

ಸಿಡಿಎಸ್‌ಸಿಒ ವರದಿಯಲ್ಲಿನ ಪ್ರಮುಖ ಅಂಶಗಳು

  • ಅಧಿಕ ರಕ್ತದೊತ್ತಡ ಚಿಕಿತ್ಸೆಗೆ ಬಳಸುವ ಟೆಲ್ಮಿಸರ್ಟಾನ್ ಮತ್ತು ಅಟ್ರೊಪೈನ್ ಸಲ್ಫೇಟ್ ಆಯಂಟಿಬಯೋಟಿಕ್‌ ಮಾತ್ರೆಗಳಾದ ಅಮಾಕ್ಸಿಲಿನ್ ಮತ್ತು ಪೊಟ್ಯಾಶಿಯಂ ಕ್ಲಾವುಲನೇಟ್‌ ಮಾತ್ರೆಗಳು 'ಪ್ರಮಾಣಿತ ಗುಣಮಟ್ಟ' ಹೊಂದಿಲ್ಲ

  • ಶೆಲ್‌ಕಾಲ್‌ ವಿಟಮಿನ್ ಸಿ ಸಾಫ್ಟ್‌ಜೆಲ್‌ನೊಂದಿಗಿನ ವಿಟಮಿನ್‌ ಬಿ ಕಾಂಪ್ಲೆಕ್ಸ್ ವಿಟಮಿನ್‌ ಸಿ ಮತ್ತು ಡಿ3 ಸಿಪ್ರೊಫ್ಲಾಕ್ಸಾಸಿನ್‌ ಮಾತ್ರೆಗಳ ಮಾದರಿಗಳು ಸಹ 'ಪ್ರಮಾಣಿತ ಗುಣಮಟ್ಟ' ಹೊಂದಿಲ್ಲ

  • ಆಂಧ್ರಪ್ರದೇಶ ಅರುಣಾಚಲ ಪ್ರದೇಶ ಅಸ್ಸಾಂ ಬಿಹಾರ ಛತ್ತೀಸಗಢ ಗೋವಾ ಗುಜರಾತ್ ತಮಿಳುನಾಡು ಸೇರಿದಂತೆ 25 ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು 'ಪ್ರಮಾಣಿತ ಗುಣಮಟ್ಟ' ಹೊಂದಿರದ ಔಷಧಗಳ ಕುರಿತು ಯಾವುದೇ ಮಾಹಿತಿ ಸಲ್ಲಿಸಿಲ್ಲ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries