ಪೆರ್ಲ : ಸಾರ್ವಜನಿಕ ಗಣೇಶೋತ್ಸವ ಸಮಿತಿ ವತಿಯಿಂದ 53ನೇ ವರ್ಷದ ಕಾರ್ಯಕ್ರಮ ಸೆ. 7ಮತ್ತು 8ರಂದು ಪೆರ್ಲ ಶ್ರೀ ಸತ್ಯನಾರಾಯಣ ಮಂದಿರದಲ್ಲಿ ಜರುಗಲಿದೆ. 7ರಂದು ಬೆಳಗ್ಗೆ 8ಕ್ಕೆ ಗಣಪತಿ ಪ್ರತಿಷ್ಠೆ, ಧ್ವಜಾರೋಹಣ, ಭಜನೆ, ವಿವಿಧ ಸ್ಪರ್ಧೆಗಳು ಜರುಗಲಿದೆ. ಮಧ್ಯಾಹ್ನ 2ಗಂಟೆಗೆ ಯಕ್ಷಗಾನ ತಾಳಮದ್ದಳೆ, ಸಂಜೆ 5ಕ್ಕೆ ಧಾರ್ಮಿಕ ಸಭೆ ನಡೆಯುವುದು. ಬೇಂಗಪದವು ಶ್ರೀ ಗಿರಿಜಾಂಬಾ ಕಿರಿಯ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕ ಕೆ. ಶಿವಕುಮಾರ್ ಅಧ್ಯಕ್ಷತೆ ವಹಿಸುವರು. ಚಿಂತಕ ಶ್ರೀಕಾಂತ ಶೆಟ್ಟಿ ಕಾರ್ಕಳ ಧಾರ್ಮಿಕ ಭಾಷಣ ಮಾಡುವರು. ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಧಾರ್ಮಿಕ ಮುಂದಾಳು ವಾಸುದೇವ ಭಟ್ ಬದಿ, ಕಾರ್ಕಳ ಹಾಗೂ ಮಂಗಳೂರು ಕೆಎಂಸಿ ಆಸ್ಪತ್ರೆ ಪ್ರಾಧ್ಯಾಪಕ ಡಾ. ಪ್ರಸನ್ನ ಮಿತ್ರ ಪೆರ್ಲ ಅವರನ್ನು ಸನ್ಮಾನಿಸಲಾಗುವುದು. ರಾತ್ರಿ 8ರಿಂದ 'ಗಂಗಾ ತರಂಗ' ದ್ವಂದ್ವ ವಯಲಿನ್ ವಾದನ ನಡೆಯುವುದು.
8ರಂದು ಬೆಳಗ್ಗೆ 8ಕ್ಕೆ ಗಂಪತಿ ಹವನ, ಭಜನೆ, ವಿವಿಧ ಸ್ಪರ್ಧೆಗಳು, ಮಧ್ಯಾಹ್ನ 3ಕ್ಕೆ ಶೋಭಾಯಾತ್ರೆ, ಅಶ್ವತ್ಥ ಕಟ್ಟೆ ಬಳಿ ಸುಡುಮದ್ದು ಪ್ರದರ್ಶನ, ವಿವಿಧ ತಂಡಗಳಿಂದ ಕುಣಿತ ಭಜನೆ ನಡೆಯುವುದು.