ಕಾಸರಗೋಡು: ಕೇರಳ ರಾಜ್ಯ ಮಾನವ ಹಕ್ಕುಗಳ ಆಯೋಗದ ನ್ಯಾಯಾಂಗ ಸದಸ್ಯ ಕೆ. ಬೈಜುನಾಥ್ ಅವರು ಕಾಸರಗೋಡಿನ ಸರ್ಕಾರಿ ಅತಿಥಿಗೃಹದಲ್ಲಿ ಅರ್ಜಿದಾರರಿಂದ ಸಾಕ್ಷ್ಯ ಸಂಗ್ರಹಿಸಿಕೊಂಡರು. ಸಭೆಯಲ್ಲಿ ಒಟ್ಟು 54 ದೂರುಗಳಲ್ಲಿ 24 ದೂರುಗಳನ್ನು ಪರಿಗಣಿಸಲಾಯಿತು. 17 ದೂರುಗಳಿಗೆ ಪರಿಹಾರ ಕಲ್ಪಿಸಲಾಯಿತು. ಒಂದು ದೂರನ್ನು ಪೆÇಲೀಸರ ತನಿಖೆ ನಂತರ ಪರಿಗಣಿಸಲು ತೀರ್ಮಾನಿಸಲಾಯಿತು. 12 ಪ್ರಕರಣಗಳನ್ನು ಮುಂದಿನ ಸಭೆಗೆ ಮುಂದೂಡಲಾಯಿತು.