HEALTH TIPS

ಮಧ್ಯ ಪ್ರದೇಶ: 5,520 ಕೆ.ಜಿ ನಕಲಿ ತುಪ್ಪ ವಶ

 ಇಂದೋರ್ : ಖಾಸಗಿ ಸಂಸ್ಥೆಯೊಂದರ ಮೇಲೆ ದಾಳಿ ನಡೆಸಿದ ಅಧಿಕಾರಿಗಳು ಗುರುವಾರ ಸುಮಾರು 5,520 ಕೆ.ಜಿ ನಕಲಿ ತುಪ್ಪವನ್ನು ವಶಪಡಿಸಿಕೊಂಡಿದ್ದಾರೆ ಎಂದು ಮಧ್ಯಪ್ರದೇಶ ಆಹಾರ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

'ವೀರ ಸಾವರ್ಕರ್ ನಗರದ ಒಂದು ಮನೆಯಲ್ಲಿ ಈ ಸಂಸ್ಥೆ ಕಾರ್ಯನಿರ್ವಹಿಸುತ್ತಿದ್ದು, ಸುಮಾರು ₹7 ಲಕ್ಷ ಮೌಲ್ಯದ 5,520 ಕೆ.ಜಿ ಕಳಪೆ ಗುಣಮಟ್ಟದ ತುಪ್ಪವನ್ನು ವಶಪಡಿಸಿಕೊಳ್ಳಲಾಗಿದೆ' ಎಂದು ಆಹಾರ ಸುರಕ್ಷತೆ ಅಧಿಕಾರಿ ಮನೀಷ್ ಸ್ವಾಮಿ ತಿಳಿಸಿದ್ದಾರೆ.

'ತಾಳೆ ಎಣ್ಣೆ, ಸೋಯಾಬಿನ್‌ ಎಣ್ಣೆ ಮತ್ತು ಇತರ ಎಣ್ಣೆಯನ್ನು ಬೆರೆಸಿ ಈ ತುಪ್ಪವನ್ನು ತಯಾರಿಸಲಾಗಿದೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಈ ತುಪ್ಪವನ್ನು ವಿವಿಧ ಸ್ಥಳೀಯ ಬ್ರ್ಯಾಂಡ್ ಹೆಸರುಗಳಲ್ಲಿ ಮಾರಾಟ ಮಾಡಲಾಗುತ್ತಿದೆ' ಎಂದು ಹೇಳಿದರು.

ನಕಲಿ ತುಪ್ಪದ ಮಾದರಿಯನ್ನು ಪರೀಕ್ಷೆಗಾಗಿ ಭೋಪಾಲ್‌ನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries