ನವದೆಹಲಿ: ವೈಯಕ್ತಿಕ ಆದಾಯ ತೆರಿಗೆದಾರರು ಇನ್ನು ಮುಂದೆ ಏಕೀಕೃತ ಪಾವತಿಗಳ ಇಂಟರ್ಫೇಸ್ (ಯುಪಿಐ) ಅಪ್ಲಿಕೇಶನ್‌ಗಳನ್ನು ಬಳಸಿಕೊಂಡು 5 ಲಕ್ಷ ರೂ.ವರೆಗೆ ತೆರಿಗೆ ಪಾವತಿಗಳನ್ನು ಮಾಡಬಹುದು. ಇದರಿಂದ ದೇಶದ ಲಕ್ಷಾಂತರ ತೆರಿಗೆದಾರರಿಗೆ ಅನುಕೂಲವಾಗಲಿದೆ.
ಯುಪಿಐ ಬಳಸಿ ತೆರಿಗೆ ಪಾವತಿ ಮಾಡಲು ಎನ್‌ಪಿಸಿಐ ವಹಿವಾಟಿನ ಮಿತಿಯನ್ನು ಹೆಚ್ಚಿಸುವ ಮೂಲಕ ಭಾರತೀಯ ರಾಷ್ಟ್ರೀಯ ಪಾವತಿ ನಿಗಮವು ಪ್ರಮುಖ ನಿರ್ಧಾರವನ್ನು ತೆಗೆದುಕೊಂಡಿದೆ. ಕಳೆದ ಆಗಸ್ಟ್ನಲ್ಲಿ ಈ ಕುರಿತು ಸುತ್ತೋಲೆ ಹೊರಡಿಸಲಾಗಿದೆ.
ಪ್ರಸ್ತುತ ಹೆಚ್ಚಿನ ವಹಿವಾಟುಗಳಿಗೆ ಯುಪಿಐ ಬಳಸಲಾಗುತ್ತದೆ. ತೆರಿಗೆ ಪಾವತಿಗೆ ಯುಪಿಐ ಮೂಲಕ ವಹಿವಾಟು ಮಿತಿಯನ್ನು 5 ಲಕ್ಷ ರೂ.ಗೆ ಹೆಚ್ಚಿಸುತ್ತಿದ್ದೇವೆ ಎಂದು ಎನ್‌ಪಿಸಿಐ ಸುತ್ತೋಲೆಯಲ್ಲಿ ತಿಳಿಸಲಾಗಿದೆ. ಬ್ಯಾಂಕ್‌ಗಳು, ಪಾವತಿ ಸೇವಾ ಪೂರೈಕೆದಾರರು ಮತ್ತು ಯುಪಿಐ ಅಪ್ಲಿಕೇಶನ್‌ಗಳು ತಮ್ಮ ಪಾವತಿ ಮಿತಿಯನ್ನು ಸೆ. 15ರೊಳಗೆ ಹೆಚ್ಚಿಸಬೇಕು ಎಂದು ಅದು ಸ್ಪಷ್ಟಪಡಿಸಿದೆ.
ಯುಪಿಐ ಪಾವತಿಗಳ ಮೂಲಕ ತೆರಿಗೆ ಪಾವತಿಯ ಮಿತಿಯನ್ನು 1 ಲಕ್ಷ ರೂ.ನಿಂದ 5 ಲಕ್ಷ ರೂ.ಗೆ ಹೆಚ್ಚಿಸುವ ನಿರ್ಧಾರವನ್ನು ಎನ್‌ಪಿಸಿಐ ತೆಗೆದುಕೊಂಡಿರುವುದನ್ನು ತೆರಿಗೆ ತಜ್ಞರು ಸ್ವಾಗತಿಸಿದ್ದಾರೆ. ಭಾರತೀಯ ಆರ್ಥಿಕತೆ ಡಿಜಿಟಲ್ ನೀತಿಯತ್ತ ಹೆಜ್ಜೆ ಹಾಕುತ್ತಿರುವ ಹಿನ್ನೆಲೆಯಲ್ಲಿ ಇಂತಹ ನಿರ್ಧಾರವು ತುಂಬಾ ಉಪಯುಕ್ತವಾಗಲಿದೆ ಎಂದು ಅವರು ಅಭಿಪ್ರಾಯಪಡುತ್ತಿದ್ದಾರೆ.