ಹೈದರಾಬಾದ್: ಭಾರಿ ಮಳೆಯಿಂದಾಗಿ ಆಂಧ್ರ ಪ್ರದೇಶ ಮತ್ತು ತೆಲಂಗಾಣದಲ್ಲಿ ಉಂಟಾಗಿರುವ ಪ್ರವಾಹ ಸ್ಥಿತಿಗೆ ರಾಮೋಜಿ ಸಮೂಹ ₹5 ಕೋಟಿ ನೆರವು ನೀಡುವುದಾಗಿ ಘೋಷಿಸಿದೆ.
ಆಂಧ್ರ, ತೆಲಂಗಾಣದಲ್ಲಿ ಪ್ರವಾಹ: ₹5 ಕೋಟಿ ನೆರವು ಘೋಷಿಸಿದ ರಾಮೋಜಿ ಸಮೂಹ
0
ಸೆಪ್ಟೆಂಬರ್ 05, 2024
Tags
ಹೈದರಾಬಾದ್: ಭಾರಿ ಮಳೆಯಿಂದಾಗಿ ಆಂಧ್ರ ಪ್ರದೇಶ ಮತ್ತು ತೆಲಂಗಾಣದಲ್ಲಿ ಉಂಟಾಗಿರುವ ಪ್ರವಾಹ ಸ್ಥಿತಿಗೆ ರಾಮೋಜಿ ಸಮೂಹ ₹5 ಕೋಟಿ ನೆರವು ನೀಡುವುದಾಗಿ ಘೋಷಿಸಿದೆ.
'ಈನಾಡು ಪರಿಹಾರ ನಿಧಿ'ಯಡಿ ಪ್ರವಾಹ ಸಂತ್ರಸ್ತರಿಗೆ ನೆರವಾಗುವುದಾಗಿ ಹೇಳಿದೆ.
'ಈ ಸಂಕಷ್ಟದ ಸಮಯದಲ್ಲಿ ಸಹಾಯ ಕೇಳುತ್ತಿರುವವರ ಕೂಗಿಗೆ ಒಂದು ಸಮುದಾಯವಾಗಿ ಅಗತ್ಯ ಬೆಂಬಲ ನೀಡುವುದು ನಮ್ಮ ಕರ್ತವ್ಯವಾಗಿದೆ.
'ಈ ಮಾನವೀಯ ಪ್ರಯತ್ನದಲ್ಲಿ ನಮ್ಮೊಂದಿಗೆ ಕೈಜೋಡಿಸಿ ಎಂದು ಪ್ರತಿಯೊಬ್ಬ ವ್ಯಕ್ತಿ ಮತ್ತು ಸಂಸ್ಥೆಯಲ್ಲಿ ಕೇಳಿಕೊಳ್ಳುತ್ತೇವೆ. ಈ ನಾಡು ಪರಿಹಾರ ನಿಧಿಗೆ ಕೊಡುಗೆ ನೀಡಿ. ಇದರಿಂದ ಸಂಸತ್ರಸ್ತರಿಗೆ ಮನೆಗಳನ್ನು ನಿರ್ಮಾಣ ಮಾಡಿ, ಎಲ್ಲವನ್ನೂ ಕಳೆದುಕೊಂಡವರ ಜೀವನದಲ್ಲಿ ಪುನರುಜ್ಜೀವನದ ಭರವಸೆಯನ್ನು ಮೂಡಿಸಬಹುದು' ಎಂದು ಸಮೂಹ ಹೇಳಿದೆ.