ಕಾಸರಗೋಡು: ರಸ್ತೆ ಕಾಮಗಾರಿ ಹಿನ್ನೆಲೆಯಲ್ಲಿ ನಗರದ ಪ್ರೆಸ್ ಕ್ಲಬ್ ಜಂಕ್ಷನ್‍ನಿಂದ ಚಂದ್ರಗಿರಿ ಸೇತುವೆ ವರೆಗಿನ ಸಂಚಾರ ನಿಯಂತ್ರಣವನ್ನು ಅಕ್ಟೋಬರ್ 5ರವರೆಗೆ ಮುಂದೂಡಲಾಗಿದೆ. ಪ್ರಸಕ್ತ ಇರುವ ಸಂಚಾರ ನಿಯಂತ್ರಣ ಸೆ. 29ರ ವರೆಗೆ ನಿಗದಿಪಡಿಸಲಾಗಿತ್ತು. ಕಾಮಗಾರಿ ಪೂರ್ತಿಗೊಳ್ಳದ ಹಿಒನ್ನೆಲೆಯಲ್ಲಿ ದಿನಾಂಕ ಮುಂದೂಡಲಾಗಿದೆ. ಈ ಕಾಲಾವಧಿಯಲ್ಲಿ ವಾಹನಗಳು ರಾಷ್ಟ್ರೀಯ ಹೆದ್ದಾರಿ ಮೂಲಕ ಸಂಚರಿಸುವಂತೆ ಲೋಕೋಪಯೋಗಿ ರಸ್ತೆ ವಿಭಾಗದ ಕಾರ್ಯಪಾಲಕ ಅಭಿಯಂತರರ ಪ್ರಕಟಣೆ ತಿಳಿಸಿದೆ.