ತಿರುವನಂತಪುರಂ: ರಾಜ್ಯದಲ್ಲಿ ಆರ್ಥಿಕ ಬಿಕ್ಕಟ್ಟು ತೀವ್ರಗೊಂಡ ಹಿನ್ನೆಲೆಯಲ್ಲಿ ಸರ್ಕಾರ ಖಜಾನೆ ನಿರ್ಬಂಧಗಳನ್ನು ಹೇರಿದೆ.
ಐದು ಲಕ್ಷ ರೂಪಾಯಿಗಿಂತ ಹೆಚ್ಚಿನ ಬಿಲ್ ಗಳಿಗೆ ನಿರ್ಬಂಧ ಹೇರಲಾಗಿದೆ. ಮುಂದಿನ ಸೂಚನೆ ಬರುವವರೆಗೆ ಈ ನಿಯಂತ್ರಣವಿರಲಿದೆ. ಹಣಕಾಸು ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ನಿರ್ಬಂಧದ ಕುರಿತ ಪತ್ರವನ್ನು ಖಜಾನೆ ನಿರ್ದೇಶಕರಿಗೆ ರವಾನಿಸಿದ್ದಾರೆ.
ಮೊದಲು ಮಿತಿಯನ್ನು 25 ಲಕ್ಷಕ್ಕೆ ನಿಗದಿಪಡಿಸಲಾಗಿತ್ತು. ಖಜಾನೆ ನಿಯಂತ್ರಣದಿಂದ ಸ್ಥಳೀಯ ಸಂಸ್ಥೆಗಳು ಮತ್ತು ಗುತ್ತಿಗೆದಾರರಿಗೆ ವ್ಯತಿರಿಕ್ತ ಪರಿಣಾಮ ಬೀರಲಿದೆ ಎಂದು ಅಂದಾಜಿಸಲಾಗಿದೆ. ಇದರಿಂದ ನಾನಾ ಇಲಾಖೆಗಳಲ್ಲಿ ಸವಲತ್ತು ವಿತರಣೆ ವಿಳಂಬವಾಗಲಿದೆ. ಓಣಂ ಖರ್ಚಿನ ನಂತರ ರಾಜ್ಯದ ಬೊಕ್ಕಸ ಮತ್ತೆ ಬಿಕ್ಕಟ್ಟಿಗೊಳಗಾಯಿತು.