ಕಾಸರಗೋಡು: ಸಪ್ಲೈಕೋ ಕಾಸರಗೋಡು ಜಿಲ್ಲಾ ಮಟ್ಟದ ಓಣಂ ಮೇಳ ಸೆ. 6ರಂದು ಬೆಳಿಗ್ಗೆ 9.30 ಕ್ಕೆ ಕಾಞಂಗಾಡ್ ಪೆಟ್ರೋಲ್ ಪಂಪ್ ಬಳಿ ಆರಂಭಗೊಳ್ಳಲಿದೆ. ನೋಂದಣಿ ಖಾತೆ ಸಚಿವ ರಾಮಚಂದ್ರನ್ ಕಡನ್ನಪಳ್ಳಿ ಮೇಳ ಉದ್ಘಾಟಿಸುವರು. ಶಾಸಕ ಇ ಚಂದ್ರಶೇಖರನ್ ಅಧ್ಯಕ್ಷತೆ ವಹಿಸುವರು. ಸಂಸದ ರಾಜ್ ಮೋಹನ್ ಉಣ್ಣಿತ್ತಾನ್ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಸಪ್ಲೈಕೋ ಓಣಂ ಮೇಳದ ಮಾರಾಟವು ಪ್ರತಿದಿನ ಮಧ್ಯಾಹ್ನ 2 ರಿಂದ ಸಂಜೆ 4 ರವರೆಗೆ ವಿಶೇಷ ರಿಯಾಯಿತಿಯೊಂದಿಗೆ ನಡೆಯಲಿದೆ. ಮೇಳದ ಅಂಗವಾಗಿ ಕುಟುಂಬಶ್ರೀ ಮತ್ತು ಜಿಲ್ಲಾ ಕೈಗಾರಿಕಾ ಕೇಂದ್ರದ ಉತ್ಪನ್ನಗಳ ಮಳಿಗೆಗಳನ್ನು ಸಹ ಸ್ಥಾಪಿಸಲಾಗುವುದು