ಕಾಸರಗೋಡು: ಹದಿಮೂರರ ಹರೆಯದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣದ ಅಪರಾಧಿ, ಕೂಡ್ಲು ಕಾನತ್ತಿಂಗರೆ ನಿವಾಸಿ ಸುಬ್ಬ(61)ಎಂಬಾತನಿಗೆ ಕಾಸರಗೋಡು ಫಾಸ್ಟ್ರ್ಯಾಕ್ ಸ್ಪೆಶ್ಯಲ್ ಪೋಕ್ಸೋ ನ್ಯಾಯಾಲಯದ ನ್ಯಾಯಾಧೀಶ ರಾಮು ರಮೇಶ್‍ಚಂದ್ರಬಾನು 125ವರ್ಷಗಳ ಜೈಲು ಶಿಕ್ಷೆ ಮತ್ತು ಐದು ಲಕ್ಷ ರೂ. ದಂಡ ವಿಧಿಸಿ ತೀರ್ಪಿತ್ತಿದ್ದಾರೆ. ವಿವಿಧ ಸೆಕ್ಷನ್‍ಗಳಲ್ಲಾಗಿ ಹಲವು ವರ್ಷಗಳ ಶಿಕ್ಷೆ ವಿಧಿಸಲಾಗಿದ್ದು, ಇವೆಲ್ಲವನ್ನೂ ಒಟ್ಟಾಗಿ 125ವರ್ಷದಲ್ಲಿ ಅನುಭವಿಸುವಂತೆ ಸೂಚಿಸಲಾಗಿದೆ. ಪ್ರಕರಣದಲ್ಲಿ ಒಟ್ಟು ಎಂಟು ಮಂದಿ ಆರೋಪಿಗಳಿದ್ದು, ಉಳಿದವರ ಶಿಕ್ಷೆಯನ್ನು ಪ್ರತ್ಯೇಕವಾಗಿ ನ್ಯಾಯಾಲಯ ನಡೆಸುತ್ತಿದೆ.
ಸುಬ್ಬ ಈ ಹಿಂದೆ ಉಳಿಯತ್ತಡ್ಕದಲ್ಲಿ ಗೂಡಂಗಡಿ ನಡೆಸಸುತ್ತಿದ್ದ ಸಂದರ್ಭ ಹನ್ನೊಂದರ ಹರೆಯದವಳಾಗಿದ್ದ ಬಾಲಕಿಯನ್ನು ಸಿಹಿತಿನಿಸು ಹಾಗೂ ಇತರ ಆಮಿಷವೊಡ್ಡಿ ಕರೆದೊಯ್ದು ಸತತ ಎರಡು ವರ್ಷಗಳ ಕಾಲ ಲೈಂಗಿಕ ಕಿರುಕುಳ ನೀಡಿದ್ದು, ಈ ಬಗ್ಗೆ ಚೈಲ್ಡ್‍ಲೈನ್ ಅಧಿಕಾರಿಗಳು ಮಾಹಿತಿ ಕಲೆಹಾಕಿ ಕಾಸರಗೋಡು ಮಹಿಳಾ ಠಾಣೆಗೆ ದೂರು ನೀಡಿದ್ದರು. ಅಂದಿನ ಮಹಿಳಾ ಠಾಣೆ ಇನ್ಸ್‍ಪೆಕ್ಟರ್ ಸಿ.ಭಾನುಮತಿ ಪೋಕ್ಸೋ ಅನ್ವಯ ಕೇಸು ದಾಖಲಿಸಿ, ನ್ಯಾಯಾಲಯಕ್ಕೆ ಚಾರ್ಜ್‍ಶೀಟ್ ಸಲ್ಲಿಸಿದ್ದರು.