ಕಾಸರಗೋಡು: ಎಂಬಿಬಿಎಸ್‍ಗೆ ವಿದೇಶದಲ್ಲಿ ಸೀಟು ದೊರಕಿಸಿಕೊಡುವ ಭರವಸೆಯೊಂದಿಗೆ 6.53ಲಕ್ಷ ರೂ. ಪಡೆದು ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿ ತೃಕ್ಕರಿಪುರ ಮಾಣಿಯಾಟ್ ನಿವಾಸಿ ಮಹಮ್ಮದ್ ಅಫ್ಸಲ್ ಎಂಬಾತನ ವಿರುದ್ಧ ವಿದ್ಯಾನಗರ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.
ವಿದ್ಯಾನಗರ ಠಾಣೆ ವ್ಯಾಪ್ತಿಯ ಫಾತಿಮತ್ ಯಾಸ್ಮಿನ್ ಎಂಬವರ ದೂರಿನ ಮೇರಗೆ ಈ ಕೇಸು. ತನಗೆ ಕಜಕಿಸ್ತಾನದಲ್ಲಿ ಎಂಬಿಬಿಎಸ್‍ಗೆ ಸೀಟು ಲಭ್ಯವಾಗಿಸುವುದಾಗಿ ತಿಳಿಸಿ ಮಹಮ್ಮದ್ ಅಫ್ಸಲ್ ಒಟ್ಟು 6.53ಲಕ್ಷ ರೂ. ಪಡೆದುಕೊಂಡಿದ್ದು, ನಂತರ ಸೀಟು ಲಭ್ಯವಾಗಿಸದೆ, ಹಣವನ್ನೂ ವಾಪಸುಮಾಡದೆ ವಂಚಿಸಿರುವುದಾಗಿ ದೂರಿನಲ್ಲಿ ತಿಳಿಸಿದ್ದಾರೆ.