ನವದೆಹಲಿ: ದೇಶದಲ್ಲಿ ಜಿಲ್ಲಾ ಮಟ್ಟದ ನ್ಯಾಯಾಲಯಗಳ ಮೂಲಸೌಕರ್ಯಗಳ ಪೈಕಿ ಶೇಕಡ 6.7ರಷ್ಟು ಮಾತ್ರ ಮಹಿಳಾ ಸ್ನೇಹಿಯಾಗಿವೆ ಎಂದು ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಹೇಳಿದ್ದಾರೆ. ಇದರಲ್ಲಿ ಸುಧಾರಣೆ ಕಾಣಬೇಕಿದೆ ಎಂದೂ ಅವರು ತಿಳಿಸಿದ್ದಾರೆ.
ನವದೆಹಲಿ: ದೇಶದಲ್ಲಿ ಜಿಲ್ಲಾ ಮಟ್ಟದ ನ್ಯಾಯಾಲಯಗಳ ಮೂಲಸೌಕರ್ಯಗಳ ಪೈಕಿ ಶೇಕಡ 6.7ರಷ್ಟು ಮಾತ್ರ ಮಹಿಳಾ ಸ್ನೇಹಿಯಾಗಿವೆ ಎಂದು ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಹೇಳಿದ್ದಾರೆ. ಇದರಲ್ಲಿ ಸುಧಾರಣೆ ಕಾಣಬೇಕಿದೆ ಎಂದೂ ಅವರು ತಿಳಿಸಿದ್ದಾರೆ.
'ಜಿಲ್ಲಾ ನ್ಯಾಯಾಂಗದ ರಾಷ್ಟ್ರೀಯ ಸಮ್ಮೇಳನ'ಉದ್ದೇಶಿಸಿ ಮಾತನಾಡಿದ ಅವರು, ಸಮಾಜದ ಎಲ್ಲರಿಗೂ ಸುರಕ್ಷಿತ ಮತ್ತು ಉತ್ತಮ ಪರಿಸರವನ್ನು ನ್ಯಾಯಾಲಯದಲ್ಲಿ ನಿರ್ಮಿಸಬೇಕಿದೆ ಎಂದು ಹೇಳಿದ್ದಾರೆ.
ನಾವು ಯಾವುದೇ ಪ್ರಶ್ನೆ ಎತ್ತದೆ, ನಮ್ಮ ಜಿಲ್ಲಾ ಮಟ್ಟದ ನ್ಯಾಯಾಲಯಗಳಲ್ಲಿ ಕೇವಲ ಶೇ 6.7ರಷ್ಟಿರುವ ಮಹಿಳಾ ಸ್ನೇಹಿ ಮೂಲಸೌಕರ್ಯವನ್ನು ಬದಲಾಯಿಸಲು ಮುಂದಾಗಬೇಕು. ಕೆಲವು ರಾಜ್ಯಗಳಲ್ಲಿ ಮೂಲಭೂತ ಮಟ್ಟದ ಹುದ್ದೆಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ಮಹಿಳೆಯರನ್ನು ನೇಮಕ ಮಾಡಿಕೊಳ್ಳುತ್ತಿರುವಾಗ ಮೂಲ ಸೌಕರ್ಯ ಸರಿ ಇಲ್ಲದಿರುವುದು ಸ್ವೀಕಾರಾರ್ಹವೇ? ಎಂದು ಅವರು ಪ್ರಶ್ನಿಸಿದ್ದಾರೆ.
ನ್ಯಾಯಾಲಯಗಳಲ್ಲಿ ವೈದ್ಯಕೀಯ ಸೌಲಭ್ಯ, ಶಿಶುವಿಹಾರ ಕೇಂದ್ರ, ಇ-ಸೇವಾ, ವಿಡಿಯೊ ಕಾನ್ಫರೆನ್ಸಿಂಗ್‌ನಂತಹ ತಾಂತ್ರಿಕ ಯೋಜನೆಗಳನ್ನು ಆರಂಭಿಸಿರುವುದರಿಂದ ನ್ಯಾಯಾಲಯಗಳಲ್ಲಿ ಜನರಿಗೆ ಅನುಕೂಲವಾಗಿದೆ ಎಂದಿದ್ದಾರೆ.
ನಮ್ಮ ನ್ಯಾಯಾಲಯಗಳು ಸಮಾಜದ ಎಲ್ಲ ಜನರಿಗೆ ಸುರಕ್ಷಿತ ಮತ್ತು ಅನುಕೂಲಕರ ವಾತಾವರಣ ಸೃಷ್ಟಿಸುವುದನ್ನು ಖಚಿತಪಡಿಸಬೇಕಿದೆ. ಅದರಲ್ಲೂ ಮಹಿಳೆಯರು ಮತ್ತು ದುರ್ಬಲ ಜನರಿಗೆ ನ್ಯಾಯಾಂಗ ವ್ಯವಸ್ಥೆ ಕೈಗೆಟುಕುವಂತೆ ಇರಬೇಕು ಎಂದಿದ್ದಾರೆ.
ನ್ಯಾಯಾಂಗ ವ್ಯವಸ್ಥೆಗೆ ಮಹಿಳೆಯರ ಸೇರ್ಪಡೆ ಸಂಖ್ಯೆ ಹೆಚ್ಚುತ್ತಿದ್ದು, ಅವರ ಜೊತೆಗಿನ ತಾರತಮ್ಯ ಕಂಡುಬಂದರೆ ಅದನ್ನು ತೊಡೆದುಹಾಕಬೇಕಿದೆ ಎಂದಿದ್ದಾರೆ.
ಅಲ್ಲದೆ, ಇತ್ತೀಚೆಗೆ ಮುಕ್ತಾಯಗೊಂಡ ಮೊದಲ ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ 5 ದಿನಗಳಲ್ಲಿ 1,000 ಪ್ರಕರಣಗಳನ್ನು ಸೌಹಾರ್ದಯುತವಾಗಿ ಇತ್ಯರ್ಥ ಮಾಡಲಾಗಿದೆ ಎಂದು ಹೇಳಿದ್ದಾರೆ.