HEALTH TIPS

ಕೃಷಿ ಸಂಬಂಧಿತ 7 ಯೋಜನೆಗಳಿಗೆ ₹13,960 ಕೋಟಿ ಬಿಡುಗಡೆಗೆ ಕೇಂದ್ರ ಸಂಪುಟ ಅಸ್ತು

         ವದೆಹಲಿ: ಕೃಷಿಗೆ ಸಂಬಂಧಿಸಿದ 7 ಬಹುದೊಡ್ಡ ಕಾರ್ಯಕ್ರಮಗಳಿಗೆ ಕೇಂದ್ರದ ಸಚಿವ ಸಂಪುಟ ಸಭೆಯು ₹13,960 ಕೋಟಿ ಬಿಡುಗಡೆಗೆ ಅನುಮೋದನೆ ನೀಡಿದೆ.

           ಇದರಲ್ಲಿ ₹2,817 ಕೋಟಿ ಡಿಜಿಟಲ್ ಅಗ್ರಿಕಲ್ಚರ್ ಮಿಷನ್ ಮತ್ತು ₹3,979 ಕೋಟಿ ಬೆಳೆ ವಿಜ್ಞಾನಕ್ಕಾಗಿ ಮೀಸಲಿಡಲಾಗಿದೆ.

            ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆ ಬಳಿಕ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಈ ಸಂಬಂಧ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

           ಕೃಷಿ ಶಿಕ್ಷಣ ಮತ್ತು ನಿರ್ವಹಣೆ ಬಲವರ್ಧನೆ ಯೋಜನೆಗೆ ₹2,291 ಕೋಟಿ, ಸುಸ್ಥಿರ ಜಾನುವಾರು ಆರೋಗ್ಯ ಮತ್ತು ಅವುಗಳ ಉತ್ಪಾದನೆ ಕುರಿತ ಯೋಜನೆಗೆ ₹1,702 ಕೋಟಿ ಬಿಡುಗಡೆಗೆ ಒಪ್ಪಿಗೆ ಸೂಚಿಸಲಾಗಿದೆ.

                ₹860 ಕೋಟಿಯನ್ನು ತೋಟಗಾರಿಕೆಯ ಸುಸ್ಥಿರ ಅಭಿವೃದ್ಧಿಗಾಗಿ ಬಿಡುಗಡೆಗೆ ಸಮ್ಮತಿಸಲಾಗಿದೆ.

ಕೃಷಿ ವಿಜ್ಞಾನ ಕೇಂದ್ರದ ಬಲವರ್ಧನೆ ₹1,202 ಕೋಟಿ ಮತ್ತು ನೈಸರ್ಗಿಕ ಸಂಪನ್ಮೂಲ ನಿರ್ವಹಣೆಗೆ ₹1,115 ಕೋಟಿ ಬಿಡುಗಡೆಗೂ ಸಂಪುಟ ಸಮ್ಮತಿಸಿದೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries