ಕಾಸರಗೋಡು: ಸಾರ್ವಜನಿಕ ಗಣೇಶೋತ್ಸವ ಸಮಿತಿ ಕಾಸರಗೋಡು ವತಿಯಿಂದ 69ನೇ ವರ್ಷದ ಸಾರ್ವಜನಿಕ ಗಣೇಶೋತ್ಸವ ಸೆ. 7ರಿಂದ 11ರ ವರೆಗೆ ಕಾಸರಗೋಡು ಶ್ರೀ ಮಲ್ಲಿಕಾರ್ಜುನ ದೇವಸ್ಥಾನ ವಠಾರದಲ್ಲಿ ಜರುಗಲಿದೆ.
7ರಂದು ಬೆಳಗ್ಗೆ 9ಕ್ಕೆ ಕೇಳುಗುಡ್ಡೆ ಭಗವಾನ್ ಸಾಯಿನಿಕೇತನ ಅಭಯ ನಿಕೇತನದಿಂದ ಶ್ರೀ ಗಣೇಶ ವಿಗ್ರಹವನ್ನು ಮೆರವಣಿಗೆಯಲ್ಲಿ ತಂದು ಪ್ರತಿಷ್ಠೆ ನಡೆಸಲಾಗುವುದು. ಮಧ್ಯಾಹ್ನ 12ಕ್ಕೆ ಧ್ವಜಾರೋಹಣ ನಡೆಯುವುದು. ಆರೆಸ್ಸೆಸ್ ಜಿಲ್ಲಾ ಸಂಘ ಚಾಲಕ್ ಪ್ರಭಾಕರನ್ ಮಾಸ್ಟರ್ ಉದ್ಘಾಟಿಸುವರು. ಗಣೇಶೋತ್ಸವ ಸಮಿತಿ ಅಧ್ಯಕ್ಷ ವಕೀಲ ಪಿ. ಮುರಳೀಧರನ್ ಅಧ್ಯಕ್ಷತೆ ವಹಿಸುವರು. ನಿವೃತ್ತ ಜಿಲ್ಲಾ ನ್ಯಾಯಾಧೀಶ ಎ.ಶಂಕರನ್ ನಾಯರ್ ಮುಖ್ಯ ಅತಿಥಿಯಾಗಿ ಭಾಗವಹಿಸುವರು. 8ರಂದು ಸಂಜೆ7ಕ್ಕೆ ನಡೆಯುವ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಚಿಂತಕ ಶ್ರೀಕಾಂತ ಶೆಟ್ಟಿ ಕಾರ್ಕಳ ಮುಖ್ಯ ಭಾಷಣ ಮಾಡುವರು. 9ರಂದು ಸಂಜೆ 6ಕ್ಕೆ ಯಕ್ಷಗಾನ ಬಯಲಾಟ, 10ರಂದು ಸಂಜೆ 6ಕ್ಕೆ ಭಕ್ತಿ ಗಾನ ಸುಧಾ ನಡೆಯುವುದು. 11ರಂದು ಸಂಜೆ 4.30ಕ್ಕೆ ಸಮಾರೋಪ ಸಮಾರಂಭದಲ್ಲಿ ಉದ್ಯಮಿ ಪ್ರಮೋದ್ ಕಾಮತ್ ಮುಖ್ಯ ಅತಿಥಿಯಾಗಿ ಭಾಗವಹಿಸುವರು. ವಕೀಲ ಪಿ. ಮುರಳೀಧರನ್ ಅಧ್ಯಕ್ಷತೆ ವಹಿಸುವರು. ಅರ್ಚನಾ ಕಾಮತ್ ಬಹುಮಾನ ವಿತರಿಸುವರು. ಸಂಜೆ 6.30ಕ್ಕೆ ಧ್ವಜಾವರೋಹಣ, ಶ್ರೀ ಮಹಾಗಣಪತಿ ವಿಗ್ರಹದ ವಿಸರ್ಜನಾ ಮೆರವಣಿಗೆ ನಡೆಯುವುದು. ಪ್ರತಿ ದಿನ ಬೆಳಗ್ಗೆ 11.30ರಿಂದ ವೇದಪಾರಾಯಣ ನಡೆಯುವುದು.