ಮಂಜೇಶ್ವರ: ವರ್ಕಾಡಿ ಬಾವಲಿಗುಳಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ದಶಮಾನೋತ್ಸವ ಕಾರ್ಯಕ್ರಮ ಸೆ. 7ರಂದು ಬಾವಲಿಗುಳಿ ವಠಾರದಲ್ಲಿ ನಡೆಯಲಿರುವುದು. ವರ್ಕಾಡಿ ಬ್ರಹ್ಮಶ್ರೀ ದಿನೇಶ್ ಕೃಷ್ಣ ತಂತ್ರಿ ಅವರ ನೇತೃತ್ವದಲ್ಲಿ ವಿವಿಧ ವೈದಿಕ ಕಾರ್ಯಕ್ರಮಗಳು ನಡೆಯಲಿರುವುದು. ಅಂದು ಬೆಳಿಗ್ಗೆ ಶ್ರೀ ಮಹಾಗಣಪತಿ ದೇವರ ವಿಗ್ರಹ ಪ್ರತಿಷ್ಠೆ ನಂತರ ದ್ವಾದಶ ನಾಳಿಕೇರ ಗಣಯಾಗ, ಅಲಂಕಾರ ಪೂಜೆ, ಮಧ್ಯಾಹ್ನ 12.30ಕ್ಕೆ ಮಹಾಪೂಜೆ ನಡೆಯಲಿರುವುದು.
ಮನೋರಂಜನ ಕಾರ್ಯಕ್ರಮದ ಅಂಗವಾಗಿ ಬೆಳಿಗ್ಗೆ 10ಕ್ಕೆ ಸ್ಥಳೀಯ ಮಕ್ಕಳ ನೃತ್ಯ ಕಾರ್ಯಕ್ರಮ, 11ರಿಂದ ಮಕ್ಕಳಿಗೆ ಸ್ಪರ್ಧಾ ಕಾರ್ಯಕ್ರಮ, ಮಧ್ಯಾಹ್ನ 12 ರಿಂದ 1 ಗಂಟೆಯವರೆಗೆ ರಾಜ್ಯ ಪ್ರಶಸ್ತಿ ಪುರಸ್ಕøತ ವಿದುಷಿ ಉಮಾ ವಿಷ್ಣು ಹೆಬ್ಬಾರ್ ಮತ್ತು ಶಿಷ್ಯ ವೃಂದ ಭಾರತಿ ನೃತ್ಯಾಲಯ ಮುಡಿಪು ಇವರಿಂದ ನೃತ್ಯ ಸಿಂಚನ ನಡೆಯುವುದು. ಮಧ್ಯಾಹ್ನ 1.30ರಿಂದ ಗೀತ್ ಮ್ಯೂಸಿಕಲ್ ಮಂಗಳೂರು ಇವರಿಂದ ಭಕ್ತಿರಸಮಂಜರಿ, ಸಂಜೆ 4ಕ್ಕೆ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಲಿರುವುದು. ಕರ್ನಾಟಕ ವಿಧಾನಸಭಾಧ್ಯಕ್ಷರಾದ ಯು.ಟಿ ಖಾದರ್, ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ, ಉದ್ಯಮಿ ಸದಾಶಿವ ಶೆಟ್ಟಿ ಕುಳೂರು ಕನ್ಯಾನ, ಮಂಜೇಶ್ವರ ಶಾಸಕ ಎ ಕೆ ಎಂ ಅಶ್ರಫ್, ಮೊದಲಾದ ಗಣ್ಯರು ಭಾಗವಹಿಸುವರು. ಈ ಸಭೆಯಲ್ಲಿ ಧಾರ್ಮಿಕ ಸಾಮಾಜಿಕ ಶೈಕ್ಷಣಿಕ ಸಹಕಾರಿ ಕ್ಷೇತ್ರಗಳಲ್ಲಿ ಅಪ್ರತಿಮ ಸೇವೆಗೈದ ಸಾಧಕರನ್ನು ಗೌರವಿಸಲಾಗುವುದು. ಈ ಸಂದರ್ಭ ವಿಶ್ವವಿಖ್ಯಾತ ಮ್ಯಾಜಿಕ್ ಸ್ಟಾರ್ ಕುದ್ರೋಳಿ ಗಣೇಶ್ ಅವರ ವಿಸ್ಮಯ ಜಾದು ಪ್ರದರ್ಶನಗೊಳ್ಳಲಿದೆ.
ನಂತರ ಶ್ರೀಗಣಪತಿಯ ಮಹಾಪೂಜೆ, ಸುದರ್ಶನ ಚಕ್ರ ಸಹಿತ ವಿಶೇಷ ಸುಡುಮದ್ದು ಪ್ರದರ್ಶನ ನಡೆಯುವುದು. ನಂತರ ಮಹಾಗಣಪತಿಯ ಭವ್ಯ ಶೋಭಾ ಯಾತ್ರೆಯು ಕೆದುಂಬಾಡಿ ನೆತ್ತಿಲಪದವು ಸೈಟ್, ಬೋಳ ಚರ್ಚ್ ಮೂಲಕ ತೌಡುಗೋಳಿಗೆ ತಲುಪಿ ನಂತರ ಸಾಂತುಪಳಿಕೆ ಮಾರಿಗುಡಿ ಬಳಿ ಕೆರೆಯಲ್ಲಿ ವಿಸರ್ಜನೆ ನಡೆಯುವುದು.