ತಿರುವಲ್ಲ: ತಿರುವಲ್ಲ ನಿವಾಸಿ ಹಾಗೂ ನಡುವಾತ್ರ ಟ್ರೇಡರ್ಸ್ ನ ನಿರ್ದೇಶಕಿ ಅಡ್ವ. ನಿರಂಜನ ನಡುವತ್ರ ಎಂಬವರು ತಮ್ಮ ಲ್ಯಾಂಡ್ ರೋವರ್ ಡಿಫೆಂಡರ್ ಕಾರಿಗೆ ಸಂಖ್ಯೆ ಕೆ.ಎಲ್. 27 ಎಂ 7777 ಅನ್ನು ಭಾರೀ ಮೊತ್ತದ ಹರಾಜಿನ ಮೂಲಕ ತಮ್ಮದಾಗಿಸಿದ್ದಾರೆ.
ತಿರುವಲ್ಲ ಆರ್‍ಟಿಒ ಅಡಿಯಲ್ಲಿ ಹರಾಜು ಪ್ರಕ್ರಿಯೆ ನಡೆದಿದೆ. ಕೇರಳದಲ್ಲಿ ನಡೆದ ಫ್ಯಾನ್ಸಿ ನಂಬರ್ ಹರಾಜಿನಲ್ಲಿ 7.85 ಲಕ್ಷ ನೀಡಿ ನಂಬ್ರ ಪಡೆಯಲಾಗಿದ್ದು, ಇದು ಈವರೆಗಿನ ಅತ್ಯಧಿಕ ಬೆಲೆಯಾಗಿದೆ. ಈ ಹಿಂದೆ ನಟ ಹಾಗೂ ನಿರ್ದೇಶಕ ಪೃಥ್ವಿರಾಜ್ ಕೊಚ್ಚಿಯಲ್ಲಿ ನೋಂದಣಿಯಾಗಿರುವ ವಾಹನಕ್ಕೆ ತಮ್ಮ ಆಯ್ಕೆಯ ನಂಬರ್ ಪಡೆಯಲು ಏಳೂವರೆ ಲಕ್ಷ ಖರ್ಚು ಮಾಡಿದ್ದರು. ನಿರಂಜನ ಹರಾಜಿನ ಮೂಲಕ ತಮ್ಮ ನೆಚ್ಚಿನ ಸಂಖ್ಯೆ 7777 ಅನ್ನು ಖರೀದಿಸುವ ಮೂಲಕ ಪೃಥ್ವಿರಾಜ್ ಅವರನ್ನು ಹಿಂದಿಕ್ಕಿದ್ದಾರೆ.
1.78 ಕೋಟಿಗೆ ಕಾರ್ಪಾಥಿಯನ್ ರೆಗ್ಗಾ ಬಣ್ಣದ ಲ್ಯಾಂಡ್ ರೋವರ್ ಡಿಫೆಂಡರ್ ಅನ್ನು ಖರೀದಿಸಿದ್ದರು. ನಡುವತ್ರ ಟ್ರೇಡರ್ಸ್ ಹೆದ್ದಾರಿ ನಿರ್ಮಾಣ ಕಾಮಗಾರಿ ಸೇರಿದಂತೆ ವಸ್ತು ಸರಬರಾಜು ಕಂಪನಿಯಾಗಿದೆ. ಅನಿಲಕುಮಾರ್-ಸಾಜಿ ಭಾಯಿ ದಂಪತಿ ಪುತ್ರಿ ನಿರಂಜನ ಅರ್ಥೆಕ್ಸ್ ವೆಂಚರ್ಸ್ ರಸ್ತೆಯಲ್ಲಿ ವಾಸವಾಗಿದ್ದಾರೆ. ಅವರು ಅರ್ಥೆಕ್ಸ್ ವೆಂಚರ್ಸ್ ಲಿಮಿಟೆಡ್‍ನ ನಿರ್ದೇಶಕರೂ ಆಗಿದ್ದಾರೆ. ನಿರಂಜನ ಅವರ ವ್ಯವಹಾರ ಕ್ವಾರಿ, ಕ್ರಷರ್‍ನಂತಹ ವಲಯಗಳಲ್ಲಿದೆ.
ನಿರಂಜನ ಮಾತನಾಡಿ, ಇಷ್ಟದ ಸಂಖ್ಯೆ ಪಡೆದುಕೊಳ್ಳುವುದು ಬಹುಕಾಲದ ಬಯಕೆಯಾಗಿದ್ದು, ಇಂತಹ ಹರಾಜು ಮೂಲಕ ಸರ್ಕಾರಕ್ಕೆ ಬರುವ ಮೊತ್ತವನ್ನು ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಬಳಸಿಕೊಳ್ಳಬಹುದಾಗಿದೆ ಎಂದರು.