ಮಲಪ್ಪುರಂ: ಮಲಪ್ಪುರಂನಲ್ಲಿ ಏಳು ಮಂದಿಗೆ ನಿಪಾ ಲಕ್ಷಣಗಳಿವೆ ಎಂದು ಆರೋಗ್ಯ ಸಚಿವೆ ವೀಣಾ ಜಾರ್ಜ್ ಹೇಳಿದ್ದಾರೆ. ನಿಪಾ ಕಾಯಿಲೆಯಿಂದ ಸಾವನ್ನಪ್ಪಿದ ಯುವಕರ ಸಂಪರ್ಕ ಪಟ್ಟಿಯಲ್ಲಿ 267 ಜನರಿದ್ದಾರೆ. ಈ ಪೈಕಿ 37 ಮಾದರಿಗಳು ನೆಗೆಟಿವ್ ಆಗಿದೆ.
ಇತರರ ಮಾದರಿಗಳನ್ನು ತಕ್ಷಣ ಪರೀಕ್ಷೆಗೆ ಕಳುಹಿಸಲಾಗುವುದು. ಇನ್ನು ಯಾರಿಗೂ ನಿಪಾ ಸೋಂಕು ಬಾರದಂತೆ ಎಚ್ಚರಿಕೆ ವಹಿಸಲಾಗುತ್ತಿದೆ ಎಂದು ಆರೋಗ್ಯ ಸಚಿವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ವಿದೇಶದಿಂದ ಬಂದಿದ್ದ 38ರ ಹರೆಯದ ವ್ಯಕ್ತಿಯೊಬ್ಬನಿಗೆ ಎಂ.ಫಾಕ್ಸ್ ಇರುವುದು ದೃಢಪಟ್ಟ ಹಿನ್ನೆಲೆಯಲ್ಲಿ ಪರೀಕ್ಷೆ ಹಾಗೂ ಕಟ್ಟೆಚ್ಚರ ವಹಿಸಲಾಗಿದೆ. ಎಂ ಪಾಕ್ಸ್ ಸೋಂಕಿತರ ಸಂಪರ್ಕ ಪಟ್ಟಿಯಲ್ಲಿ 23 ಜನರಿದ್ದಾರೆ. ಅವರ ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಲಾಗುವುದು.
ದುಬೈನಿಂದ ಯುವಕನೊಂದಿಗೆ ಪ್ರಯಾಣಿಸಿದ ವಿಮಾನದ ಮುಂದಿನ ಮತ್ತು ಹಿಂದಿನ ಸಾಲಿನಲ್ಲಿದ್ದ 43 ಜನರನ್ನು ಗುರುತಿಸಲಾಗಿದೆ.
ಪ್ರಸ್ತುತ, ಸಂಪರ್ಕ ಪಟ್ಟಿಯಲ್ಲಿರುವವರಿಗೆ ಮನೆಯಲ್ಲೇ ಇರುವಂತೆ ಸೂಚಿಸಲಾಗಿದೆ. ಆರು ಮಂದಿ ವಿದೇಶದಿಂದ ಬಂದವರು. ಮಂಚೇರಿ ವೈದ್ಯಕೀಯ ಕಾಲೇಜಿನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಎಡವಣ್ಣ ಓತಾಯಿ ಮೂಲದ ಯುವಕನ ಆರೋಗ್ಯ ಸ್ಥಿತಿ ತೃಪ್ತಿಕರವಾಗಿದೆ. ಅವರ ಮಾರ್ಗ ನಕ್ಷೆಯನ್ನು ಶೀಘ್ರದಲ್ಲೇ ಬಿಡುಗಡೆ ಮಾಡಲಾಗುವುದು ಎಂದಿರುವರು.