HEALTH TIPS

ಆಂಧ್ರ ಪ್ರದೇಶ: ಭಾರಿ ಮಳೆಗೆ 8 ಸಾವು

           ಹೈದರಾಬಾದ್‌: ಆಂಧ್ರಪ್ರದೇಶದಲ್ಲಿ ಶುಕ್ರವಾರದಿಂದ ಭಾರಿ ಮಳೆ ಸುರಿಯುತ್ತಿದ್ದು, ಮಳೆ ಸಂಬಂಧಿತ ಅವಘ‌ಡಗಳಿಂದ ಕನಿಷ್ಠ ಎಂಟು ಮಂದಿ ಮೃತಪಟ್ಟಿದ್ದಾರೆ.

          ವಿಜಯವಾಡದ ಸುನ್ನಪ್ಪುಬಟ್ಟಿಲ ಸೆಂಟರ್‌ನಲ್ಲಿ ಮನೆಯೊಂದರ ಮೇಲೆ ಬೃಹತ್‌ ಬಂಡೆಯೊಂದು ಉರುಳಿದ್ದು, ಒಂದೇ ಕುಟುಂಬದ ನಾಲ್ವರು ಮೃತಪಟ್ಟಿದ್ದಾರೆ.

            ಸ್ಥಳೀಯ ಆಡಳಿತವು ಭಾರಿ ಯಂತ್ರೋಪಕರಣಗಳನ್ನು ಬಳಸಿ ಮನೆಯ ಅವಶೇಷಗಳನ್ನು ತೆರವುಗೊಳಿಸುವ ಮೂಲಕ ಮೃತದೇಹಗಳನ್ನು ಹೊರತೆಗೆಯಲಾಗಿದೆ.

              ಗುಂಟೂರು ಜಿಲ್ಲೆಯ ಉಪ್ಪಲಪಾಡುವಿನಲ್ಲಿ ಶಿಕ್ಷಕ ಹಾಗೂ ಇಬ್ಬರು ವಿದ್ಯಾರ್ಥಿಗಳು ಚಲಿಸುತ್ತಿದ್ದ ಕಾರು ಪ್ರವಾಹದಲ್ಲಿ ಕೊಚ್ಚಿ ಹೋಗಿದೆ. ಮೃತರನ್ನು ನೆಡುಂಪಲ್ಲಿ ರಾಘವೇಂದ್ರ(38), ಪಸುಪುಲೆಟಿ ಸೌದಿ(6) ಮತ್ತು ಕೋಡೂರಿ ಮಾನ್ವಿತ್‌(9) ಎಂದು ಗುರುತಿಸಲಾಗಿದೆ. ಮತ್ತೊಂದು ಘಟನೆಯಲ್ಲಿ ಮಂಗಳಗಿರಿಯ ಗಂಡಾಲಯ್ಯಪೇಟದಲ್ಲಿ ಭೂಕುಸಿತಕ್ಕೆ ವೃದ್ಧೆಯೊಬ್ಬರು ಬಲಿಯಾಗಿದ್ದಾರೆ.

             ವಿಜಯವಾಡ ನಗರದ ಪೂರ್ವ ಭಾಗದಲ್ಲಿನ ಬೆಂಜ್‌ ವೃತ್ತದಲ್ಲಿ ಕಳೆದ 24 ಗಂಟೆಗಳಲ್ಲಿ 16 ಸೆಂ.ಮೀಗೂ ಹೆಚ್ಚು ಮಳೆಯಾಗಿದ್ದು, ಇದು ಆಗಸ್ಟ್‌ ತಿಂಗಳ ಒಂದೇ ದಿನದಲ್ಲಿ ಈವರೆಗೆ ಸುರಿದ ಅತಿ ಹೆಚ್ಚಿನ ಮಳೆಯಾಗಿದೆ. ವಿಜಯವಾಡ ವಿಮಾನ ನಿಲ್ದಾಣದಲ್ಲಿ 123 ಮಿ.ಮೀ. ಮಳೆಯಾಗಿದ್ದು, ಕಳೆದ 200 ವರ್ಷಗಳಲ್ಲಿ ಆಗಸ್ಟ್‌ ತಿಂಗಳ ದಿನವೊಂದರಲ್ಲಿ ಸುರಿದ ಹೆಚ್ಚಿನ ಪ್ರಮಾಣದ ಮಳೆಯಾಗಿದೆ ಎಂದು ಆಂಧ್ರಪ್ರದೇಶದ ಹವಾಮಾನ ಪುರುಷ ಎಂದೇ ಹೆಸರಾಗಿರುವ ಕೆ. ಪ್ರಣೀತ್‌ ತಿಳಿಸಿದ್ದಾರೆ.

                ಪರಿಹಾರ ಘೋಷಣೆ: ಪ್ರವಾಹದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ಆಂಧ್ರಪ್ರದೇಶ ಸರ್ಕಾರವು ₹5 ಲಕ್ಷ ಪರಿಹಾರ ಘೋಷಿಸಿದೆ. ಇನ್ನೂ 2-3 ದಿನ ಭಾರಿ ಮಳೆ ಮುಂದುವರಿಯುವ ಮುನ್ಸೂಚನೆ ಇದ್ದು, ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ಮಳೆ ಪರಿಸ್ಥಿತಿ ಕುರಿತು ಅಧಿಕಾರಿಗಳೊಂದಿಗೆ ಪರಿಶೀಲನಾ ಸಭೆ ನಡೆಸಿದ್ದಾರೆ.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries