ಬೈರೂತ್: ಹಿಜ್ಬುಲ್ಲಾ ಬಂಡುಕೋರರ ಭದ್ರಕೋಟೆಯಾಗಿರುವ ಲೆಬನಾನ್‌ನ ರಾಜಧಾನಿ ಬೈರೂತ್ ಮೇಲೆ ಇಸ್ರೇಲ್ ನಡೆಸಿದ ವಾಯುದಾಳಿಯಲ್ಲಿ 8 ಜನರು ಮೃತಪಟ್ಟಿದ್ದಾರೆ. ಈ ಪೈಕಿ ಹಿಜ್ಬುಲ್ಲಾ ಕಮಾಂಡರ್ ಸಹ ಮೃತಪಟ್ಟಿದ್ದಾನೆ ಎಂದು ಮೂಲಗಳು ತಿಳಿಸಿವೆ.
ಬೈರೂತ್: ಹಿಜ್ಬುಲ್ಲಾ ಬಂಡುಕೋರರ ಭದ್ರಕೋಟೆಯಾಗಿರುವ ಲೆಬನಾನ್‌ನ ರಾಜಧಾನಿ ಬೈರೂತ್ ಮೇಲೆ ಇಸ್ರೇಲ್ ನಡೆಸಿದ ವಾಯುದಾಳಿಯಲ್ಲಿ 8 ಜನರು ಮೃತಪಟ್ಟಿದ್ದಾರೆ. ಈ ಪೈಕಿ ಹಿಜ್ಬುಲ್ಲಾ ಕಮಾಂಡರ್ ಸಹ ಮೃತಪಟ್ಟಿದ್ದಾನೆ ಎಂದು ಮೂಲಗಳು ತಿಳಿಸಿವೆ.
ನಿರ್ದಿಷ್ಟ ಪ್ರದೇಶಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿರುವುದಾಗಿ ಇಸ್ರೇಲ್ ಹೇಳಿದೆ.
ಇಸ್ರೇಲ್ ದಾಳಿಯಲ್ಲಿ 8 ಮಂದಿ ಮೃತಪಟ್ಟಿದ್ದು, 59ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ ಎಂದು ಲೆಬನಾನ್ ಆರೋಗ್ಯ ಸಚಿವಾಲಯ ತಿಳಿಸಿದೆ.
ದಕ್ಷಿಣ ಬೈರೂತ್‌ನಲ್ಲಿ ಇಸ್ರೇಲ್ ನಡೆಸಿದ ದಾಳಿಯಲ್ಲಿ ಹಿಜ್ಬುಲ್ಲಾದ ರಾಡ್ವಾನ್ ಘಟಕದ ಮುಖ್ಯಸ್ಥ ಇಬ್ರಾಹಿಂ ಅಖಿಲ್ ಹತ್ಯೆಗೀಡಾಗಿದ್ದಾನೆ ಎಂದು ಹಿಜ್ಬುಲ್ಲಾದ ನಿಕಟ ಮೂಲವು ತಿಳಿಸಿದೆ. ಕಮಾಂಡರ್ ಅಖಿಲ್ ಸಾವನ್ನು ಹಿಜ್ಬುಲ್ಲಾ ಇನ್ನೂ ಖಚಿತಪಡಿಸಿಲ್ಲ.
ಅಕ್ಟೋಬರ್ 7ರಂದು ಇಸ್ರೇಲ್-ಹಮಾಸ್ ಯುದ್ಧ ಆರಂಭವಾದ ಬಳಿಕ ಬೈರೂತ್ ಮೇಲೆ ನಡೆದ ಇಸ್ರೇಲ್‌ನ ಮೂರನೇ ಪ್ರಬಲ ದಾಳಿ ಇದಾಗಿದೆ.
'ಇಸ್ರೇಲಿನ ವೈಮಾನಿಕ ದಾಳಿಯಲ್ಲಿ ರಾಡ್ವಾನ್ ಘಟಕದ ಕಮಾಂಡರ್ ಇಬ್ರಾಹಿಂ ಅಖಿಲ್ ಸಾವಿಗೀಡಾಗಿದ್ದಾರೆ. ಹಿಜ್ಬುಲ್ಲಾದಲ್ಲಿ ಫುವಾಡ್ ಶುಕ್ರ್ ನಂತರ ಅಖಿಲ್ ಎರಡನೇ ಸ್ಥಾನದಲ್ಲಿ ಗುರುತಿಸಿಕೊಂಡಿದ್ದರು'ಎಂದು ಮೂಲವೊಂದು ಹೇಳಿದೆ..
ಈ ವರ್ಷದ ಆರಂಭದಲ್ಲಿ ಹಿಜ್ಬುಲ್ಲಾದ ಟಾಪ್ ಕಮಾಂಡರ್ ಫುವಾಡ್ ಶುಕ್ರ್‌ನನ್ನು ಇಸ್ರೇಲ್ ವೈಮಾನಿಕ ದಾಳಿ ನಡೆಸಿ ಕೊಂದು ಹಾಕಿತ್ತು.
1983ರಲ್ಲಿ ಬೈರೂತ್‌ನ ಅಮೆರಿಕ ರಾಯಭಾರ ಕಚೇರಿ ಮೇಲೆ ಬಾಂಬ್ ದಾಳಿ ನಡೆಸಿ, 63 ಜನರ ಸಾವಿಗೆ ಕಾರಣನಾಗಿದ್ದ ಅಖಿಲ್ ಬಗ್ಗೆ ಮಾಹಿತಿ ನೀಡಿದವರಿಗೆ 7 ಮಿಲಿಯನ್ ಡಾಲರ್ ಬಹುಮಾನ ನಿಡುವುದಾಗಿ ಅಮೆರಿಕ ಘೋಷಿಸಿತ್ತು.