ಕೀವ್ (AP): ಉಕ್ರೇನ್‌ನ ಈಶಾನ್ಯ ಭಾಗದ ಸುಮಿ ನಗರದ ಆಸ್ಪತ್ರೆಯ ಮೇಲೆ ರಷ್ಯಾ ನಡೆಸಿದ ಡ್ರೋನ್ ದಾಳಿಯಲ್ಲಿ ಎಂಟು ಮಂದಿ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.
ಉಕ್ರೇನ್ ಆಸ್ಪತ್ರೆ ಮೇಲೆ ರಷ್ಯಾ ಡ್ರೋನ್ ದಾಳಿ: 8 ಸಾವು
0
ಸೆಪ್ಟೆಂಬರ್ 29, 2024
Tags
ಕೀವ್ (AP): ಉಕ್ರೇನ್‌ನ ಈಶಾನ್ಯ ಭಾಗದ ಸುಮಿ ನಗರದ ಆಸ್ಪತ್ರೆಯ ಮೇಲೆ ರಷ್ಯಾ ನಡೆಸಿದ ಡ್ರೋನ್ ದಾಳಿಯಲ್ಲಿ ಎಂಟು ಮಂದಿ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.
'ಶಾಹಿದ್ ಡ್ರೋನ್ ಬಳಸಿ ಶನಿವಾರ ಬೆಳಿಗ್ಗೆ ದಾಳಿ ನಡೆಸಲಾಗಿದೆ. ಮೊದಲ ದಾಳಿಯಲ್ಲಿ ಒಬ್ಬರು ಮೃತಪಟ್ಟಿದ್ದಾರೆ.
ಶುಕ್ರವಾರ ರಾತ್ರಿಯಿಂದ ಬೆಳಗಿನ ಜಾವದವರೆಗೆ ರಷ್ಯಾ ಹಾರಿಸಿದ 73 ಡ್ರೋನ್‌ಗಳಲ್ಲಿ 69ನ್ನು ಹಾಗೂ ನಾಲ್ಕು ಕ್ಷಿಪಣಿಗಳಲ್ಲಿ ಎರಡನ್ನು ಹೊಡೆದುರುಳಿಸಲಾಗಿದೆ ಎಂದು ಉಕ್ರೇನ್ ಸೇನೆ ಹೇಳಿದೆ. ಕೀವ್ ನಗರ ಹಾಗೂ ಹೊರವಲಯದಲ್ಲಿ 15 ಡ್ರೋನ್‌ಗಳನ್ನು ನಾಶಪಡಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಮತ್ತೊಂದೆಡೆ, ಉಕ್ರೇನ್ ಹಾರಿಸಿದ ನಾಲ್ಕು ಡ್ರೋನ್‌ಗಳನ್ನು ಬೆಲ್ಗೊರೊಡ್ ವಲಯದಲ್ಲಿ ಹೊಡೆದುರುಳಿಸಲಾಗಿದೆ ಎಂದು ರಷ್ಯಾದ ರಕ್ಷಣಾ ಸಚಿವಾಲಯದ ಮೂಲಗಳು ತಿಳಿಸಿವೆ.