ನವದೆಹಲಿ: ಎರಡು ವರ್ಷದ ಹಿಂದೆ ಮಧ್ಯ ದೆಹಲಿಯಲ್ಲಿ ಹರಿಯಾಣ ಮೂಲದ ಆಭರಣ ವ್ಯಾಪಾರಿಯೊಬ್ಬರ ₹8 ಕೋಟಿ ಮೌಲ್ಯದ ಚಿನ್ನಾಭರಣಗಳನ್ನು ದರೋಡೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಸಂಚುಕೋರನನ್ನು ಪೊಲೀಸರು ಬಂಧಿಸಿದ್ದಾರೆ.
ನವದೆಹಲಿ: ಎರಡು ವರ್ಷದ ಹಿಂದೆ ಮಧ್ಯ ದೆಹಲಿಯಲ್ಲಿ ಹರಿಯಾಣ ಮೂಲದ ಆಭರಣ ವ್ಯಾಪಾರಿಯೊಬ್ಬರ ₹8 ಕೋಟಿ ಮೌಲ್ಯದ ಚಿನ್ನಾಭರಣಗಳನ್ನು ದರೋಡೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಸಂಚುಕೋರನನ್ನು ಪೊಲೀಸರು ಬಂಧಿಸಿದ್ದಾರೆ.
ಜೈ ಮಾತಾ ದಿ ಲಾಜಿಸ್ಟಿಕ್ಸ್‌ನಲ್ಲಿ ಕೆಲಸ ಮಾಡುತ್ತಿರುವ ಸೋಮ್‌ವೀರ್ ಮತ್ತು ಜಗದೀಶ್ ಸೈನಿ ದೆಹಲಿಯಲ್ಲಿ ಚಿನ್ನ ಮತ್ತು ವಜ್ರದ ಆಭರಣಗಳನ್ನು ತಲುಪಿಸುತ್ತಿದ್ದಾಗ ಈ ದರೋಡೆ ನಡೆದಿತ್ತು ಎಂದು ಡೆಪ್ಯುಟಿ ಪೊಲೀಸ್ ಕಮಿಷನರ್ (ಅಪರಾಧ) ಅಮಿತ್ ಗೋಯಲ್ ಶನಿವಾರ ತಿಳಿಸಿದ್ದಾರೆ.
ಪೊಲೀಸರ ಸಮವಸ್ತ್ರ ಧರಿಸಿದ್ದ ನಾಲ್ವರು ದರೋಡೆಕೋರರು, ಪಹರ್‌ಗಂಜ್‌ನ ದೇಶ ಬಂಧು ಗುಪ್ತಾ ರಸ್ತೆ ಬಳಿ ಸೋಮ್‌ವೀರ್ ಹಾಗೂ ಸೈನಿ ಕಣ್ಣಿಗೆ ಖಾರದ ಪುಡಿಯನ್ನು ಎರಚಿ, ಅವರ ಬಳಿ ಇದ್ದ ಆಭರಣಗಳನ್ನು ದೋಚಿದ್ದರು.
2022ರ ಆ. 31ರಂದು ಹರಿಯಾಣದ ಅಂಬಾಲಾ ನಗರದ ನಿವಾಸಿ ಸೋಮವೀರ್ ದರೋಡೆ ಪ್ರಕರಣ ದಾಖಲಿಸಿದ್ದರು. ಬಂಧಿತ ಆರು ಜನರಿಂದ 6.27 ಕೆ.ಜಿ. ಚಿನ್ನ, 106 ವಜ್ರ, 2.9 ಕೆ.ಜಿ. ಬೆಳ್ಳಿಯನ್ನು ವಶಪಡಿಸಿಕೊಳ್ಳಲಾಗಿದ್ದು, ಪ್ರಮುಖ ಆರೋಪಿ ಅಜಿತ್ ಸಿಂಗ್ ತಲೆಮರೆಸಿಕೊಂಡಿದ್ದಾನೆ ಎಂದು ಡಿಸಿಪಿ ಹೇಳಿದ್ದಾರೆ.
ಪ್ರಮುಖ ಸಂಚುಕೋರನನ್ನು ಪೊಲೀಸರು ತಂಡವು ಪಾಲಂ ಹಳ್ಳಿಯಲ್ಲಿರುವ ಅಜಿತ್ ಸಿಂಗ್ ಅಡಗುತಾಣದಿಂದಲೇ ಶುಕ್ರವಾರ ಬಂಧಿಸಿದೆ.