HEALTH TIPS

ಕೇಂದ್ರ ಉಚಿತವಾಗಿ ನೀಡಲಿರುವ 950 ಇ-ಬಸ್‍ಗಳನ್ನು ಬೇಡವೆಂದ ಕೇರಳ: 93 ಕೋಟಿ ವೆಚ್ಚದಲ್ಲಿ 555 ಡೀಸೆಲ್ ಬಸ್‍ಗಳನ್ನು ಖರೀದಿಸಲಾಗುವುದು; ಗಣೇಶ್ ಕುಮಾರ್


ತಿರುವನಂತಪುರ: ಹಸಿರು ವಾಹನ ಸಂಚಾರ ಹೆಚ್ಚಿಸುವ ‘ಪ್ರಧಾನ ಮಂತ್ರಿ ಎಬಸ್ ಸೇವಾ’ ಯೋಜನೆಯ ಭಾಗವಾಗಿ ರಾಜ್ಯದ ಹತ್ತು ನಗರಗಳಿಗೆ ಕೇಂದ್ರ ಸರ್ಕಾರ ನೀಡಲಿರುವ 950 ಬಸ್‍ಗಳನ್ನು ಸಾರಿಗೆ ಸಚಿವ ಕೆ.ಬಿ.ಗಣೇಶ್ ಕುಮಾರ್ ತಿರಸ್ಕರಿಸಿದ್ದಾರೆ.

ಈ ಸಂಬಂಧ ಕಡತವನ್ನು ಸಾರಿಗೆ ಇಲಾಖೆ ಹಿಂತಿರುಗಿಸಿದೆ. ಕಡತದಲ್ಲಿ ಉಲ್ಲೇಖಿಸಲಾದ ಚೇರ್ತಲ ಮತ್ತು ಕಾಯಂಕುಳಂ ಎರಡೂ ಈಗ ಸಾಕಷ್ಟು ಬಸ್‍ಗಳನ್ನು ಹೊಂದಿವೆ. ಕೊಚ್ಚಿ ಮತ್ತು ತಿರುವನಂತಪುರಂ ಆ ಪಟ್ಟಿಯಲ್ಲಿಲ್ಲ. ಎಂಬುದು ಸಚಿವರ ಉತ್ತರವಾಗಿತ್ತು. ತಿರುವನಂತಪುರಂ ಕೂಡ ಸೇರಿದೆ ಎಂದು ಸೂಚಿಸಿದಾಗ ಪ್ರಸ್ತುತ ಸಂಚರಿಸುತ್ತಿರುವ ಬಸ್ಸುಗಳೀಗೇ ಇಲ್ಲಿ ಜಾಗವಿಲ್ಲ ಎಂಬ ಉತ್ತರ ನೀಡಿದರು. 

ಹೊಸ ಡೀಸೆಲ್ ಬಸ್ ಗಳು ಸಾಕು ಎಂದು ಸಚಿವರು ಸೂಚಿಸಿದರು. 555 ಡೀಸೆಲ್ ಬಸ್ ಖರೀದಿಸಲು ಯೋಜನಾ ನಿಧಿಯಲ್ಲಿ 93 ಕೋಟಿ ಮೀಸಲಿಡುವಂತೆ ಸಾರಿಗೆ ಇಲಾಖೆ ಹಣಕಾಸು ಇಲಾಖೆಗೆ ಪತ್ರ ಕಳುಹಿಸಿದ್ದು, ಕೇಂದ್ರವು 950 ಬಸ್‍ಗಳನ್ನು ಉಚಿತವಾಗಿ ನೀಡಿದ್ದರೂ ರಾಜ್ಯ ಸರ್ಕಾರ ರೂ 42 ಕೋಟಿ.ವ್ಯರ್ಥ ವ್ಯಯಿಸುವುದರ ಅರ್ಥ ಅರಿವಾಗುತ್ತಿಲ್ಲ. ಹೀಗಿದ್ದರೂ ಲಾಭದಾಯಕವಾಗಿಲ್ಲವೇ ಎಂಬ ಪ್ರಶ್ನೆಗೆ ಸಚಿವರ ಬಳಿ ಉತ್ತರವಿಲ್ಲ.

ಡೀಸೆಲ್ ಬಸ್ ಖರೀದಿಸುವಾಗ ಮಧ್ಯವರ್ತಿಗಳ ಮೂಲಕ ಲಭಿಸುವ ಕಮಿಷನ್ ಗೆ ಕಣ್ಣು ಹಾಯಿಸುವುದೇ ರಾಜ್ಯ ವಿರೋಧಿ ನಿರ್ಧಾರ ಎಂಬ ಆರೋಪ ಕೇಳಿಬಂದಿದೆ.

ಐಬಸ್ ಸೇವಾ ಯೋಜನೆಯ ಭಾಗವಾಗಿ ಸಾರ್ವಜನಿಕ ಖಾಸಗಿ ಸಹಭಾಗಿತ್ವದ (ಪಿಪಿಪಿ) ಮಾದರಿಯಲ್ಲಿ ಕೇಂದ್ರವು 169 ನಗರಗಳಿಗೆ 10,000 ಎಲೆಕ್ಟ್ರಿಕ್ ಬಸ್‍ಗಳನ್ನು ಒದಗಿಸುತ್ತಿದೆ. ಕೇರಳವು 10 ನಗರಗಳಲ್ಲಿ 950 ಮೆಟ್ರೋ ಶೈಲಿಯ ಬಸ್‍ಗಳನ್ನು ಹೊಂದಿದ್ದು, ಸೋಲಾರ್ ಶಕ್ತಿಯಿಂದ ಚಲಿಸುವ ಸ್ವಯಂಚಾಲಿತ ವ್ಯವಸ್ಥೆಗಳನ್ನು ಹೊಂದಿದೆ. ಲೋ ಫೆÇ್ಲೀರ್ ಎಲೆಕ್ಟ್ರಿಕ್ ಬಸ್‍ಗಳು 12 ಮೀಟರ್ ಮತ್ತು ಒಂಬತ್ತು ಮೀಟರ್‍ಗಳ ಎರಡು ವಿಭಾಗಗಳಲ್ಲಿರಲಿವೆ. ಕೇರಳ 12 ಮೀಟರ್ ಬಸ್ ಗಳ ಬೇಡಿಕೆ ವ್ಯಕ್ತಪಡಿಸಿತ್ತು.  ತಿರುವನಂತಪುರಂ ಮತ್ತು ಕೊಚ್ಚಿಗೆ ತಲಾ 150 ಬಸ್‍ಗಳನ್ನು ಚಾಲಕರ ಜೊತೆಗೆ ಒದಗಿಸಲಾಗುವುದು. ಇಂಧನ ವೆಚ್ಚವನ್ನು ರಾಜ್ಯವೇ ಭರಿಸಬೇಕು. ಕೇಂದ್ರವು ಚಾರ್ಜಿಂಗ್ ಕೇಂದ್ರಗಳನ್ನು ಒದಗಿಸುತ್ತದೆ. ಅಲ್ಲದೆ, ಕಾರ್ಯಾಚರಣೆ ನಡೆಸಿದ ಕಿಲೋಮೀಟರ್‍ಗಳ ಆಧಾರದ ಮೇಲೆ ರಾಜ್ಯವು ಕೇಂದ್ರಕ್ಕೆ ಆದಾಯದ ಪಾಲನ್ನು ಪಾವತಿಸಬೇಕಾಗುತ್ತದೆ. ಕೇಂದ್ರದ ಪಾಲು ಹಾಗೂ ಇತರೆ ಎಲ್ಲ ವೆಚ್ಚ ಭರಿಸಿ ರಾಜ್ಯಕ್ಕೆ ಪ್ರತಿ ಕಿ.ಮೀ.ಗೆ 1015 ರೂ.ಲಾಭದಲ್ಲಿ ಪ್ಯಾಕೇಜ್ ಅಂತಿಮಗೊಳಿಸಲಾಗಿತ್ತು.. ಆಂಟನಿ ರಾಜು ಅವರು ಸಾರಿಗೆ ಸಚಿವರಾಗಿದ್ದಾಗ ನೀಡಿದ್ದ ಪ್ರಸ್ತಾವನೆಯನ್ನು ಗಣೇಶ್ ಕುಮಾರ್ ತಿರಸ್ಕರಿಸಿದ್ದಾರೆ. ಇತರ ರಾಜ್ಯಗಳು ಈಗಾಗಲೇ 3975 ಬಸ್‍ಗಳನ್ನು ಪಡೆದುಕೊಂಡಿವೆ.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries