ತಿರುವನಂತಪುರಂ: ಮದ್ಯ ಮಾರಾಟವೇ ಆದಾಯದ ಮೂಲವಾಗಿರುವ ರಾಜ್ಯ ಕೇರಳ. ಆದ್ದರಿಂದ ಓಣಂ ಸಮಯದಲ್ಲಿ ಬಿವರೇಜ್ ಕಾರ್ಪೋರೇಷನ್ ಮಾರಾಟವು ಪ್ರಮುಖ ಚರ್ಚೆಯ ವಿಷಯವಾಗಿದೆ. ಮದ್ಯದ ಮೂಲಕ ಸರ್ಕಾರಕ್ಕೆ 5000 ಕೋಟಿ ರೂಪಾಯಿಗೂ ಹೆಚ್ಚು ತೆರಿಗೆ ಬರುತ್ತದೆ.
ಓಣಂ ಮಾರಾಟದಲ್ಲಿ ದಾಖಲೆ ತಿಳಿಯಬೇಕಾದರೂ ಬೆವ್ಕೋ ಈ ಬಾರಿಯೂ ಉದ್ಯೋಗಿಗಳ ಬೋನಸ್ ನಲ್ಲಿ ದಾಖಲೆ ಬರೆದಿದೆ. ಉದ್ಯೋಗಿಗಳಿಗೆ ಬೋನಸ್ ಆಗಿ 95,000 ರೂ.ಬಿಡುಗಡೆಗೊಳಿಸಿದೆ. ಇದು ರಾಜ್ಯದಲ್ಲಿಯೇ ಅತಿ ಹೆಚ್ಚು ಬೋನಸ್ ಮೊತ್ತವಾಗಿದೆ. ಈ ಬಾರಿ ರೂ.1 ಲಕ್ಷ ಬೋನಸ್ ನೀಡುವಂತೆ ಶಿಫಾರಸು ಮಾಡಲಾಗಿತ್ತು. ಅಬಕಾರಿ ಸಚಿವರ ಸಭಾಂಗಣದಲ್ಲಿ ನಡೆದ ಚರ್ಚೆಯಲ್ಲಿ ಬೋನಸ್ ಕುರಿತು ನಿರ್ಧರಿಸಲಾಯಿತು.
ಕಳೆದ ವರ್ಷ 90,000 ರೂ.ನೀಡಲಾಗಿತ್ತು. ಸರ್ಕಾರದ ಬೋನಸ್ ಮಿತಿಯನ್ನು ಮೀರುವುದನ್ನು ತಪ್ಪಿಸಲು, ಕಾರ್ಯಕ್ಷಮತೆಯ ಪ್ರೋತ್ಸಾಹ ಮತ್ತು ಎಕ್ಸ್ ಗ್ರೇಷಿಯಾದಂತಹ ವಿವಿಧ ವರ್ಗಗಳ ಅಡಿಯಲ್ಲಿ ಮೊತ್ತವನ್ನು ವರ್ಗಾಯಿಸಲಾಗುತ್ತದೆ. ಬೆವ್ಕೋ 5000 ಉದ್ಯೋಗಿಗಳನ್ನು ಹೊಂದಿದೆ. ಸ್ವೀಪರ್ ಕಾರ್ಮಿಕರಿಗೆ 5000 ಬೋನಸ್ ನೀಡಲಾಗುತಯ್ತದೆ.