HEALTH TIPS

ತುಳುವ ಚಳುವಳಿಗೆ 96 ವರ್ಷ: ನಾಳೆ ಉಡುಪಿ ಗೋವಿಂದ ಪೈ ಸಂಶೋಧನಾ ಕೇಂದ್ರದಲ್ಲಿ ನೆಂಪು ಕಾರ್ಯಕ್ರಮ

          ಉಡುಪಿ: 1928 ಸಪ್ಟೆಂಬರ್ 23 ರಂದು ಭಾರತದ ಸ್ವಾತಂತ್ರ್ಯ ಮತ್ತು ತುಳು ಚಳವಳಿಗೋಸ್ಕರ ಸ್ಥಾಪನೆಯಾದ ತುಳುವ ಮಹಾಸಭೆಗೆ ಇದೀಗ 96 ವರ್ಷ ಸಂದಿದೆ.  ತುಳು ಚಳುವಳಿಯ ಸ್ಥಾಪಕ ಎಸ್.ಯು. ಪನಿಯಾಡಿ ಯವರು ತುಳು ಮಹಾಸಭವನ್ನು ಶ್ರೀ ಪೆÇಳಲಿ ಶೀನಪ್ಪ ಹೆಗ್ಡೆ ಮತ್ತು ಶ್ರೀ ನಾರಾಯಣ ಕಿಲ್ಲೆ ಮುಂತಾದವರೊಂದಿಗೆ ಸೇರಿ ಆರಂಭಿಸಿದುದು ತುಳುವ ಚಳುವಳಿಯ ಐತಿಹಾಸಿಕ ದಿನ. ಇದೀಗ ಶತಮಾನದತ್ತ ದಾಪುಗಾಲು ಹಾಕುತ್ತಿರುವ ಸಂದರ್ಭದಲ್ಲಿ ತುಳುವಲ್ರ್ಡ್ ಫೌಂಡೇಶನ್ ತುಳು ಮಹಾಸಭಾ ಹಮ್ಮಿಕೊಂಡಿದ್ದ ಕಾರ್ಯಗಳನ್ನು ಮತ್ತು ಯೋಜನೆಗಳನ್ನು ಹಿರಿಯರ ಆಶಯದಂತೆ ಅದೇ ಹೆಸರಿನಲ್ಲಿ ಕಾರ್ಯಪ್ರವೃತ್ತಿಗೊಳ್ಳಲು ತೀರ್ಮಾನಿಸಿದೆ  ತುಳುವ ಮಹಾಸಭಾದ  96ರ ಈ ಚಾರಿತ್ರಿಕ ನೆನಪನ್ನು  ಸ್ಮರಿಸಲು ಮತ್ತು ಹಿರಿಯರಿಗೆ ನಮನ ಸಲ್ಲಿಸಲು "ತುಳುವ ಮಹಾಸಭಾ 96 ನೆಂಪು" ಕಾರ್ಯಕ್ರಮವನ್ನು  ನಾಳೆ  23  ಸೋಮವಾರ ಮಧ್ಯಾಹ್ನ  2.00 ಗಂಟೆಗೆ ಉಡುಪಿಯ ರಾಷ್ಟ್ರಕವಿ ಶ್ರೀ ಗೋವಿಂದ ಪೈ ಸಂಶೋಧನಾ ಕೇಂದ್ರದ ಸಭಾಂಗಣದಲ್ಲಿ ಆಯೋಜಿಸಲಾಗಿದೆ.

           ತುಳುವ ಚಳುವಳಿ ಹೋರಾಟವನ್ನು ಅವಿಸ್ಮರಣೀಯಗೊಳಿಸುವ ಈ ಕಾರ್ಯಕ್ರಮದಲ್ಲಿ ಮತ್ತು ಮುಂದಿನ ಯೋಜನೆಗಳ ರೂಪುರೇμÉ ನಿರ್ಧರಿಸುವ ಸಲುವಾಗಿ ಚರ್ಚೆಯಲ್ಲಿ ಭಾಗವಹಿಸಲು ಎಲ್ಲಾ ತುಳು ಬಾಂಧವರನ್ನು ತುಳುವಲ್ರ್ಡ್ ಫೌಂಡೇಶನ್ನ ಗೌರವ ಅಧ್ಯಕ್ಷರಾದ ಹರಿನಾರಾಯಣ ಅಸ್ರಣ್ಣ ಕಟೀಲು, ಅಧ್ಯಕ್ಷರಾದ ಶ್ರೀ ಸರ್ವೋತ್ತಮ ಶೆಟ್ಟಿ ಮತ್ತು ಪ್ರಧಾನ ಕಾರ್ಯದರ್ಶಿ ಪೆÇ್ರ.ಪುರುμÉೂೀತ್ತಮ ಬಲ್ಯಾಯ ಸ್ಥಾಪಕ ನಿರ್ದೇಶಕರಾದ ಡಾ. ರಾಜೇಶ್ ಕೃಷ್ಣ ಆಳ್ವ, ಮತ್ತು ಫೌಂಡೇಶನ್ನ ಎಲ್ಲಾ ನಿರ್ದೇಶಕರುಗಳು ಹಾಗೂ ಸದಸ್ಯರು ಆತ್ಮೀಯವಾಗಿ ಸ್ವಾಗತಿಸಿದ್ದಾರೆ.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries