ಮುಂಬೈ: ಬ್ರೆಜಿಲ್ ಮೂಲದ ಮಹಿಳೆಯೊಬ್ಬರಿಂದ ಅಕ್ರಮವಾಗಿ ಸಾಗಿಸುತ್ತಿದ್ದ ಕೊಕೇನ್ ತುಂಬಿದ 124 ಮಾತ್ರೆಗಳನ್ನು ಮುಂಬೈ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಂದಾಯ ಗುಪ್ತಚರ ನಿರ್ದೇಶನಾಲಯ ವಶಪಡಿಸಿಕೊಂಡಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

'ಸೆಪ್ಟೆಂಬರ್ 18ರಂದು ಸಾವೊ ಪಾಲೊದಿಂದ ವಿಮಾನ ನಿಲ್ದಾಣಕ್ಕೆ ಬಂದಿಳಿದ ಮಹಿಳೆಯನ್ನು ತಡೆದು ಶೋಧ ನಡೆಸಲಾಯಿತು.
'ವೈದ್ಯಕೀಯ ಪರೀಕ್ಷೆಗಾಗಿ ಮಹಿಳೆಯನ್ನು ನಗರದ ಜೆ.ಜೆ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದ್ದು, ಅಲ್ಲಿ 973 ಗ್ರಾಂ ಕೊಕೇನ್ ಹೊಂದಿದ್ದ ಸುಮಾರು 124 ಮಾತ್ರೆಗಳನ್ನು ಹೊರತೆಗೆಯಲಾಗಿದೆ. ಮಹಿಳೆಯನ್ನು ಬಂಧಿಸಲಾಗಿದೆ. ಅಂತರರಾಷ್ಟ್ರೀಯ ಡ್ರಗ್ ಸಿಂಡಿಕೇಟ್‌ನ ಇತರ ಸದಸ್ಯರನ್ನು ಪತ್ತೆ ಹಚ್ಚಲು ಹೆಚ್ಚಿನ ತನಿಖೆ ನಡೆಯುತ್ತಿದೆ. ವಶಪಡಿಸಿಕೊಂಡ ಕೊಕೇನ್ ಮೌಲ್ಯ ₹9.73 ಕೋಟಿ ಎಂದು ಅಂದಾಜಿಸಲಾಗಿದೆ' ಎಂದು ಅಧಿಕಾರಿ ತಿಳಿಸಿದ್ದಾರೆ.