ಚೆನ್ನೈ: ತಮಿಳುನಾಡಿನಲ್ಲಿ ಕೃತಕ ಬುದ್ಧಿಮತ್ತೆ (AI) ಲ್ಯಾಬ್ ಆರಂಭಿಸುವ ಕುರಿತು ಗೂಗಲ್ ಕಂಪನಿಯೊಂದಿಗೆ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಒಡಂಬಡಿಕೆಗೆ ಸಹಿ ಹಾಕಿದ್ದಾರೆ.
ಚೆನ್ನೈ: ತಮಿಳುನಾಡಿನಲ್ಲಿ ಕೃತಕ ಬುದ್ಧಿಮತ್ತೆ (AI) ಲ್ಯಾಬ್ ಆರಂಭಿಸುವ ಕುರಿತು ಗೂಗಲ್ ಕಂಪನಿಯೊಂದಿಗೆ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಒಡಂಬಡಿಕೆಗೆ ಸಹಿ ಹಾಕಿದ್ದಾರೆ.
'ನಾನ್ ಮುದಲವನ್' ಎಂಬ ಯೋಜನೆಯಡಿ 20 ಲಕ್ಷ ಯುವ ತಂತ್ರಜ್ಞರಿಗೆ ಕೃತಕ ಬುದ್ಧಿಮತ್ತೆ ಕ್ಷೇತ್ರದಲ್ಲಿ ಉದ್ಯೋಗ ಕಲ್ಪಿಸುವ ಕಾರ್ಯಕ್ರಮದ ಭಾಗವಾಗಿ ಒಡಂಬಡಿಕೆ ಮಾಡಿಕೊಂಡಿರುವುದಾಗಿ ಸ್ಟಾಲಿನ್ ಹೇಳಿದ್ದಾರೆ ಎಂದು ವರದಿಯಾಗಿದೆ.
'ಈ ಒಡಂಬಡಿಕೆಯು ಕೃತಕ ಬುದ್ಧಿಮತ್ತೆ ಆಧಾರಿತ ತಂತ್ರಜ್ಞಾನದ ಸ್ಟಾರ್ಟ್‌ಅಪ್, ಸಣ್ಣ ಹಾಗೂ ಮಧ್ಯಮ ಕೈಗಾರಿಕೆಗಳು, ಗ್ರಾಮೀಣ ಆರ್ಥಿಕತೆಯೊಂದಿಗಿನ ಸಹಭಾಗಿತ್ವಕ್ಕೆ ನೆರವಾಗಲಿದೆ. ಇದರೊಂದಿಗೆ ಗೂಗಲ್‌ನ ಪಿಕ್ಸೆಲ್ 8 ಮೊಬೈಲ್ ಫೋನ್ ತಯಾರಿಕಾ ಘಟಕ ಸ್ಥಾಪನೆ, ಗೂಗಲ್ ಉತ್ಪನ್ನ ಹಾಗೂ ತಂತ್ರಜ್ಞಾನಗಳ ಅಭಿವೃದ್ಧಿಗೂ ಅವಕಾಶ ಕಲ್ಪಿಸಲಾಗುವುದು' ತಮಿಳುನಾಡು ಸರ್ಕಾರ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ಈ ಭೇಟಿಯ ಸಂದರ್ಭದಲ್ಲಿ ಆಯಪಲ್, ಲಿಂಕ್ಡ್‌ಇನ್ ಹಾಗೂ ಮೈಕ್ರೊಸಾಫ್ಟ್ ಕಂಪನಿಗಳಿಗೂ ಸ್ಟಾಲಿನ್ ಭೇಟಿ ನೀಡಿದ್ದು, ತಮಿಳುನಾಡಿನಲ್ಲಿ ಹೂಡಿಕೆ ಮಾಡುವಂತೆ ಆಹ್ವಾನ ನೀಡಿದ್ದಾರೆ. ಇವರೊಂದಿಗೆ ಕೈಗಾರಿಕಾ ಸಚಿವ ಟಿ.ಆರ್.ಬಿ. ರಾಜಾ ಹಾಗೂ ಅಧಿಕಾರಿಗಳು ಇದ್ದರು.