HEALTH TIPS

'ಕಾಸ್ಟಿಂಗ್ ಕೌಚ್'​ ವಿವಾದದಿಂದ AMMA ಕಂಗಾಲು! ಜವಾಬ್ದಾರಿ ಹೊರಲು ಇಚ್ಛಿಸದ ಇಬ್ಬರು ಸ್ಟಾರ್​ ನಟರು

 ಕೆ. ಹೇಮಾ ಸಮಿತಿ ವರದಿ ಬಿಡುಗಡೆಯಾದ ಬಳಿಕ ಅನೇಕ ಸ್ಟಾರ್​ ನಟಿಯರು ತಮಗಾದ 'ಕಾಸ್ಟಿಂಗ್ ಕೌಚ್'​ ಅನುಭವಗಳ ಬಗ್ಗೆ ಮುಕ್ತವಾಗಿ ಕ್ಯಾಮರಾ ಮುಂದೆ ಮಾತನಾಡುತ್ತಿದ್ದಾರೆ. ಚಿತ್ರರಂಗದಲ್ಲಿ ಯಾರಿಂದ ತಾವು ಇಂತಹ ಕೆಟ್ಟ ಪರಿಸ್ಥಿತಿ ಎದುರಿಸಿದೆವು ಎಂಬುದನ್ನು ಎಳೆ ಎಳೆಯಾಗಿ ಬಿಚ್ಚಿಡುವ ಮೂಲಕ ಚಿತ್ರರಂಗದ ಕರಾಳ ಮುಖವನ್ನು ಬಟಾಬಯಲು ಮಾಡ್ತಿದ್ದಾರೆ.

ಒಬ್ಬರಲ್ಲ, ಇಬ್ಬರಲ್ಲ ಹಲವು ನಟಿಮಣಿಯರು ಚಿತ್ರರಂಗದ ಕಹಿಸತ್ಯವನ್ನು ಈಗಾಗಲೇ ಬಿಚ್ಚಿಟ್ಟಿದ್ದು, ಕಷ್ಟಕರ ಪರಿಸ್ಥಿತಿ ನೆನೆದು ಕಣ್ಣೀರಿಟ್ಟಿದ್ದಾರೆ. ಆಶ್ಚರ್ಯಕರ ಎಂದರೆ ಹೇಮಾ ವರದಿ ಹೊರಬಿದ್ದ ನಂತರ ಇಲ್ಲಿಯವರೆಗೆ ಲೈಂಗಿಕ ಕಿರುಕುಳ ಆರೋಪದಡಿ ದಾಖಲಾಗಿರುವ ಒಟ್ಟು ಪ್ರಕರಣಗಳ ಸಂಖ್ಯೆ 17ಕ್ಕೂ ಅಧಿಕ. ಸದ್ಯ ಈ ಎಲ್ಲಾ ಕಹಿ ಬೆಳವಣಿಗೆಗಳಿಂದ ಮಾಲಿವುಡ್​ ಕಂಗಾಲಾಗಿದೆ.

ಮಲಯಾಳಂ ಚಿತ್ರರಂಗದಲ್ಲಿ ಕಾಸ್ಟಿಂಗ್ ಕೌಚ್​ ವಿಷಯ ಸಂಬಂಧಿಸಿದಂತೆ ನಡೆಯುತ್ತಿರುವ ಇತ್ತೀಚಿನ ಬೆಳವಣಿಗೆಗಳು ಮಾಲಿವುಡ್​ನ ಘನತೆ, ಗೌರವಕ್ಕೆ ಕಪ್ಪುಚುಕ್ಕೆ ತಂದ ಬೆನ್ನಲ್ಲೇ ಇದೀಗ ಮಲಯಾಳಂ ಚಲನಚಿತ್ರ ಕಲಾವಿದರ ಸಂಘದ (ಅಮ್ಮ) ಅಧ್ಯಕ್ಷ ಸ್ಥಾನಕ್ಕೆ ಹಿರಿಯ ನಟ ಮೋಹನ್ ಲಾಲ್ ರಾಜೀನಾಮೆ ಘೋಷಿಸಿದ್ದಾರೆ. ನಟನ ಬೆನ್ನಲ್ಲೇ ಸಮಿತಿಯ ಸದಸ್ಯರೆಲ್ಲರೂ ಒಟ್ಟಾಗಿ ರಾಜೀನಾಮೆ ಸಲ್ಲಿಸಿದ್ದು, ಕಮಿಟಿಯನ್ನು ವಿಸರ್ಜಿಸಿದ್ದಾರೆ. ತಮ್ಮ ಸ್ಥಾನಕ್ಕೆ ಮೋಹನ್ ​​ಲಾಲ್ ರಾಜೀನಾಮೆ ಘೋಷಿಸುತ್ತಿದ್ದಂತೆ​ ಕಾರ್ಯಕಾರಿ ಸಮಿತಿಯ ಎಲ್ಲ ಸದಸ್ಯರು ಜಂಟಿಯಾಗಿ ರಾಜೀನಾಮೆ ಸಲ್ಲಿಸಿದ್ದಾರೆ. ಈ ಮೂಲಕ ಕಮಿಟಿಯ ವಿಸರ್ಜನೆಗೆ ಕಾರಣರಾಗಿದ್ದು ಸದ್ಯ ಚಿತ್ರರಂಗಕ್ಕೆ ಭಾರೀ ಆಶ್ಚರ್ಯ ತಂದಿದೆ.

ಅಸೋಸಿಯೇಷನ್ ​​ಬಿಡುಗಡೆಗೊಳಿಸಿದ ಹೇಳಿಕೆಯ ಪ್ರಕಾರ, ನಮ್ಮ ಸಮಿತಿಯ ಕೆಲವು ಸದಸ್ಯರು ಲೈಂಗಿಕ ದೌರ್ಜನ್ಯದ ಆರೋಪಗಳನ್ನು ಎದುರಿಸಿದ ನಂತರ ಕಾರ್ಯಕಾರಿ ಸಮಿತಿಯನ್ನು ವಿಸರ್ಜಿಸಲಾಗಿದೆ. ಆ ವಿಷಯಗಳು ಈಗಾಗಲೇ ಮಾಧ್ಯಮಗಳಲ್ಲಿ ವರದಿಯಾಗಿವೆ. ನೈತಿಕ ಹೊಣೆಗಾರಿಕೆಯನ್ನು ಹೊತ್ತುಕೊಂಡು ಕಾರ್ಯಕಾರಿ ಸಮಿತಿಯನ್ನು ವಿಸರ್ಜಿಸಲು AMMA ನಿರ್ಧರಿಸಿದೆ. ಎರಡು ತಿಂಗಳೊಳಗೆ ಚುನಾವಣೆಯ ನಂತರ ಹೊಸ ಸಮಿತಿಯನ್ನು ರಚಿಸಲಾಗುವುದು ಎಂದು ತಿಳಿಸಲಾಗಿತ್ತು. ಆದ್ರೆ, ಚಿತ್ರರಂಗಕ್ಕೆ ಮೇಟಿಯಾಗಿರುವ ಹಿರಿಯ ನಟರಾದ ಮೋಹನ್​ಲಾಲ್ ಮತ್ತು ಮಮ್ಮುಟ್ಟಿ ಸದ್ಯ ಅಮ್ಮ ಕಮಿಟಿಗೆ ವಾಪಾಸ್ ಬರಲು ಮನಸು ಮಾಡುತ್ತಿಲ್ಲ ಎಂಬುದು ಸ್ಪಷ್ಟವಾಗಿದೆ.

ಮೂಲಗಳ ಪ್ರಕಾರ, ಅಮ್ಮ ಸಮಿತಿಯ ಹಿರಿಯ ಸದಸ್ಯರೊಬ್ಬರು ಮಾತನಾಡಿ, 'ಇತ್ತೀಚಿನ ಬೆಳವಣಿಗೆಗಳಿಂದ ಮಲಯಾಳಂ ಚಲನಚಿತ್ರ ಕಲಾವಿದರ ಸಂಘದ ಜವಾಬ್ದಾರಿ ಹೊರಲು ಸೂಪರ್​ಸ್ಟಾರ್​ಗಳಾದ ಮೋಹನ್​ಲಾಲ್ ಮತ್ತು ಮಮ್ಮುಟ್ಟಿ ಆಸಕ್ತಿ ತೋರುತ್ತಿಲ್ಲ. ಈ ವಿಷಯವನ್ನು ಅವರಿಬ್ಬರು ಗಂಭೀರ ಮತ್ತು ವೈಯಕ್ತಿಕವಾಗಿ ತೆಗೆದುಕೊಂಡಿದ್ದಾರೆ. ವಿವಾದದಲ್ಲಿ ಕೊಚ್ಚಿ ಹೋಗಿರುವ ಕಮಿಟಿಯೊಂದಿಗೆ ಸಂಬಂಧ ಹೊಂದಲು ಅವರು ಬಯಸುತ್ತಿಲ್ಲ' ಎಂದು ಬೇಸರ ವ್ಯಕ್ತಪಡಿಸಿದ್ದಾರೆ,


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries