HEALTH TIPS

ಅದಾನಿಯ ತೆಕ್ಕೆಗೆ ನೈರೋಬಿ ವಿಮಾನ ನಿಲ್ದಾಣ; ಕೀನ್ಯಾದ ನ್ಯಾಯಾಲಯ ತಡೆಯಾಜ್ಞೆ

          ನೈರೋಬಿ: ಇಲ್ಲಿನ ಪ್ರಮುಖ ವಿಮಾನ ನಿಲ್ದಾಣದ ನಿರ್ವಹಣೆಯನ್ನು ಭಾರತದ ಅದಾನಿ ಸಮೂಹಕ್ಕೆ ವರ್ಗಾಯಿಸುವ ಪ್ರಕ್ರಿಯೆಗೆ ಕೀನ್ಯಾದ ಹೈಕೋರ್ಟ್ ತಾತ್ಕಾಲಿಕ ತಡೆಯಾಜ್ಞೆ ನೀಡಿದೆ ಎಂದು 'ಫೈನಾನ್ಷಿಯಲ್ ಟೈಮ್ಸ್' ವರದಿ ಮಾಡಿದೆ.

         ಪೂರ್ವ ಆಫ್ರಿಕಾದ ಅತಿದೊಡ್ಡ ವಿಮಾನಯಾನ ಕೇಂದ್ರವಾದ ಜೊಮೊ ಕೀನ್ಯಾಟ್ಟ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ನಿರ್ವಹಣೆಯನ್ನು ಅದಾನಿ ಸಮೂಹಕ್ಕೆ 30 ವರ್ಷಗಳ ಗುತ್ತಿಗೆ ನೀಡುವ ಪ್ರಸ್ತಾಪಕ್ಕೆ ಕೀನ್ಯಾದ ಹೈಕೋರ್ಟ್ ತಾತ್ಕಾಲಿಕ ತಡೆಯಾಜ್ಞೆ ನೀಡಿದೆ ಎಂದು ವರದಿಯು ತಿಳಿಸಿದೆ.

            ಆದರೆ ಈ ಕುರಿತು ಆದಾನಿ ಸಮೂಹದಿಂದ ತಕ್ಷಣಕ್ಕೆ ಪ್ರತಿಕ್ರಿಯೆ ಲಭ್ಯವಾಗಿಲ್ಲ.

ಕೀನ್ಯಾದ ಪ್ರಮುಖ ವಿಮಾನ ನಿಲ್ದಾಣವನ್ನು ಅದಾನಿ ಸಮೂಹಕ್ಕೆ ನೀಡುವ ಪ್ರಸ್ತಾವಿತ ಒಪ್ಪಂದವನ್ನು ವಿರೋಧಿಸಿ ಕೀನ್ಯಾದ ವಿಮಾನಯಾನ ಕಾರ್ಮಿಕರ ಒಕ್ಕೂಟವು ಕಳೆದ ತಿಂಗಳು ಮುಷ್ಕರಕ್ಕೆ ಕರೆ ನೀಡಿತ್ತು. ಇದರಿಂದ ಉದ್ಯೋಗ ಕಡಿತ ಉಂಟಾಗಲಿದೆ ಎಂದು ಕಳವಳ ವ್ಯಕ್ತಪಡಿಸಿತ್ತು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries